ಬಾಲಿವುಡ್ ಅನೇಕ ಸ್ಟಾರ್ ನಟರಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಕರಣ್ ಜೋಹಾರ್ (Karan Johar) ಅವರದ್ದು. ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಹುತೇಕ ನಟರಿಗೆ ಕರಣ್ ಸಿನಿಮಾ ಮಾಡಿದ್ದಾರೆ. ಅದರಲ್ಲೂ ಕರಣ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬಾರದೇ ಇರುವ ನಟ ನಟಿಯರೇ ಇಲ್ಲ. ಬಾಲಿವುಡ್ ಬಗ್ಗೆ ಆಳ ಅಗಲ ಗೊತ್ತಿರುವ ಕರಣ್, ಇಡೀ ಬಾಲಿವುಡ್ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಆ ಹೇಳಿಕೆ ಇದೀಗ ಬಾಲಿವುಡ್ ನಲ್ಲಿ ಬೆಂಕಿ ಹಚ್ಚಿದೆ.
ಖಾಸಗಿ ವಾಹಿನಿಯೊಂದರ ಟಾಕ್ ಶೋನಲ್ಲಿ ಮಾತನಾಡಿರುವ ಕರಣ್ ಜೋಹಾರ್, ಬಾಲಿವುಡ್ (Bollywood,) ನಲ್ಲಿ ಹೇಳಿಕೊಳ್ಳುವಂತಹ ಮತ್ತು ಟ್ಯಾಲೆಂಟ್ (Talent) ಇರುವಂತಹ ನಟ ಯಾರೂ ಇಲ್ಲ ಎಂದು ಹೇಳುವ ಮೂಲಕ ಸ್ವತಃ ನಿರೂಪಕರನ್ನೇ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕ ದಕ್ಷಿಣದ ತಾರೆಯರನ್ನು ಪರೋಕ್ಷವಾಗಿ ಹೊಗಳಿದ್ದಾರೆ. ಅಲ್ಲಿಗೆ ಮತ್ತೊಂದು ಸುತ್ತಿನ ದಕ್ಷಿಣ ಮತ್ತು ಬಾಲಿವುಡ್ ತಾರೆಯರ ವಾರ್ ಶುರುವಾಗುತ್ತಾ ಕಾದು ನೋಡಬೇಕು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
ಆ ಶೋವನ್ನು ರಿತೇಶ್ ದೇಶಮುಖ (Riteish Deshmukh) ನಡೆಸಿಕೊಡುತ್ತಿದ್ದು, ಅತಿಥಿಯಾಗಿ ಕರಣ್ ಜೋಹಾರ್ ಬಂದಿದ್ದರು. ‘ನೀವು ನಟನನ್ನು ಆಯ್ಕೆ ಮಾಡಿಕೊಳ್ಳುವಾಗ ಲುಕ್‍ಗೆ ಆದ್ಯತೆ ಕೊಡುತ್ತೀರಾ? ಅಥವಾ ಮತ್ತೇನಾದರೂ ನೋಡುತ್ತೀರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಲುಕ್ ಜೊತೆ ಟ್ಯಾಲೆಂಟ್ ಕೂಡ ನೋಡುತ್ತೇನೆ. ಆದರೆ, ಈವರೆಗೂ ನನಗೆ ಟ್ಯಾಲೆಂಟ್ ಸಿಕ್ಕಿಲ್ಲ ಎಂದು ಉತ್ತರಿಸಿದ್ದಾರೆ. ಕರಣ್ ಅವರ ಈ ಉತ್ತರ ಇದೀಗ ಹಲವರ ಕಂಗೆಣ್ಣಿಗೆ ಗುರಿಯಾಗಿದೆ.