ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ (Dating) ವಿಚಾರ ಹಲವು ವರ್ಷಗಳಿಂದ ಹರಿದಾಡುತ್ತಲೇ ಇದೆ. ಒಟ್ಟೊಟ್ಟಿಗೆ ಹೋಟೆಲ್ ನಲ್ಲಿ ಕಾಣಿಸಿಕೊಳ್ಳುವುದು, ತಡರಾತ್ರಿ ಪಾರ್ಟಿ ಮಾಡುವುದು ಹಾಗೂ ನ್ಯೂ ಯಿಯರ್ ಅನ್ನು ಗೋವಾದಲ್ಲಿ ಆಚರಿಸೋದು ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಹಾಗಾಗಿ ಇಬ್ಬರೂ ಡೇಟಿಂಗ್ ಮಾಡುವ ವಿಚಾರ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಕೇವಲ ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ವುಡ್ ನಲ್ಲೂ ಸದ್ದು ಮಾಡಿದೆ. ಹೀಗಾಗಿಯೇ ಕರಣ್ ಜೋಹಾರ್ (Karan Johar) ಕೂಡ ಈ ಇಬ್ಬರ ರಿಲೇಶನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದು, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಕುರಿತಾಗಿ ಕರಣ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಚರ್ಚೆ ಆಗುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ
ಕಾಫಿ ವಿತ್ ಕರಣ್ ಶೋಗೆ ಬಾಲಿವುಡ್ ನಟಿ ನಿಹಾರಿಕಾ (Niharika) ಬಂದಿದ್ದರು. ಈ ಸಂದರ್ಭದಲ್ಲಿ ಕರಣ್ ಮಾತನಾಡ್ತಾ ತನ್ನನ್ನು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಆಹ್ವಾನಿಸಲಿಲ್ಲ. ಅದು ಯಾಕೆ ಅಂತಾನೇ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ನಿಹಾರಿಕಾ, ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮದುವೆಗೆ ಕಂಡಿತಾ ಕರೆಯುತ್ತೇನೆ ಅಂತಾರೆ. ನಿಹಾರಿಕಾ ಹೀಗೆ ಆಹ್ವಾನ ನೀಡುತ್ತಿದ್ದಂತೆಯೇ ನಿಹಾರಿಕಾಳ ಮದುವೆ ಯಾರ ಜೊತೆ ಆಗಬೇಕು ಎಂದು ಚರ್ಚಿಸುತ್ತಾರೆ ಕರಣ್.
ಮೊದಲು ಪ್ರಭಾಸ್ ಹೆಸರು ಸೂಚಿಸುವ ಕರಣ್, ನೀವು ಪ್ರಭಾಸ್ ಜೊತೆ ಮದುವೆ ಆಗಬಹುದು ಎನ್ನುತ್ತಾರೆ. ಪ್ರಭಾಸ್ ವಯಸ್ಸಲ್ಲಿ ದೊಡ್ಡವರು ಅಂತಾಳೆ. ಹಾಗಾದರೆ, ವಿಜಯ್ ದೇವರಕೊಂಡ (Vijay Devarakonda) ಜೊತೆ ಮದುವೆ ಆಗಬಹುದು. ಅವರು ಸಿಂಗಲ್ ಅನ್ನುತ್ತಾರೆ ಕರಣ್. ತಕ್ಷಣವೇ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಬರುತ್ತದೆ. ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ವಿಜಯ್ ಸಿಂಗಲ್ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಮೂಲಕ ವಿಜಯ್ ಮತ್ತು ರಶ್ಮಿಕಾ ಲವ್ ಅನ್ನು ಬ್ರೇಕ್ ಅಪ್ ಮಾಡುತ್ತಾರೆ ಕರಣ್.