ಮುಂಬೈ: ಟಾಲಿವುಡ್‍ನ ರೊಮ್ಯಾಟಿಂಕ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೋಡಿ ಮತ್ತೊಮ್ಮೆ ವರ್ಕೌಟ್ ಆಗಿದ್ದು, ಸದ್ಯ ಈ ಜೋಡಿ ಅಭಿನಯದ ‘ಡಿಯರ್ ಕಾಮ್ರೇಡ್’ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೇ ಬೆನ್ನಲ್ಲೇ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.
Advertisement
ಒಂದೆಡೆ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸುದ್ದಿ ಸದ್ದು ಮಾಡುತ್ತಿದ್ದಂತೆ ಇನ್ನೊಂದೆಡೆ ಬಾಲಿವುಡ್‍ನಲ್ಲಿ ಡಿಯರ್ ಕಾಮ್ರೇಡ್ ಚಿತ್ರ ಸೆಟ್ಟೇರಲಿದೆ. ಹೌದು ಬಿಟೌನ್‍ನ ಖ್ಯಾತ ನಿರ್ದೇಶಕ/ನಿರ್ಮಾಪಕ ಕರಣ್ ಜೋಹರ್ ಈ ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ಬರೋಬ್ಬರಿ 6 ಕೋಟಿ ರೂ. ಹಣ ನೀಡಿ ‘ಡಿಯರ್ ಕಾಮ್ರೇಡ್’ ಚಿತ್ರದ ರಿಮೇಕ್ ರೈಟ್ಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಈಗಾಗಲೇ ಟಾಲಿವುಡ್ ‘ಅರ್ಜುನ್ ರೆಡ್ಡಿ’ ಬಾಲಿವುಡ್‍ನಲ್ಲಿ ‘ಕಬೀರ್ ಸಿಂಗ್’ ಆಗಿ ಸಿನಿ ಪ್ರಿಯರ ಮನ ಗೆದ್ದಿದೆ. ಕಬೀರ್ ಸಿಂಗ್ ಹಿಟ್ ಆಗಿದ್ದೇ ತಡ ಇತ್ತ ‘ಟಾಲಿವುಡ್ ರೌಡಿ’ ಚಿತ್ರಗಳಿಗೆ ಬಾಲಿವುಡ್‍ನಲ್ಲಿ ಹೊಸ ಕ್ರೇಜ್ ಸೃಷ್ಟಿಯಾಗಿದೆ. ‘ಅರ್ಜುನ್ ರೆಡ್ಡಿ’ ರಿಮೇಕ್ ‘ಕಬೀರ್ ಸಿಂಗ್’ ಸಿನಿಮಾ 277 ಕೋಟಿ ಹಣ ಗಳಿಕೆ ಜೊತೆ ಪ್ರೇಕ್ಷಕರ ಮನ ಗೆದ್ದಿರುವಾಗ ‘ಡಿಯರ್ ಕಾಮ್ರೇಡ್’ ಚಿತ್ರ ಕೂಡ ಭಾರೀ ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ ಎಂದು ಈ ಚಿತ್ರದ ರಿಮೇಕ್ ಹಕ್ಕಿಗಾಗಿ ಹಲವು ನಿರ್ಮಾಪಕರು ರೇಸ್‍ನಲ್ಲಿ ಇದ್ದರು. ಆದರೆ ಕರಣ್ ಜೋಹರ್ ಎಲ್ಲರನ್ನು ಹಿಂದಿಕ್ಕಿ ಚಿತ್ರದ ರಿಮೇಕ್ ಹಕ್ಕನ್ನು ಬರೋಬ್ಬರಿ 6 ಕೋಟಿ ನೀಡಿ ತಮ್ಮದಾಗಿಸಿಕೊಂಡಿದ್ದಾರೆ.
Advertisement
Advertisement
ಸ್ವತಃ ಕರಣ್ ಜೋಹರ್ ಟ್ವೀಟ್ ಮಾಡಿ, ಬೆರಗುಗೊಳಿಸುವಂತಹ ಲವ್ ಸ್ಟೋರಿ, ಅದ್ಭುತ ನಟನೆ, ಸಂಗೀತ ಸಂಯೋಜನೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ನಟನೆ, ನಿರ್ದೇಶಕ ಭರತ್ ಕಮ್ಮಾ ಶ್ರಮ ಅದ್ಭುತ. ಈ ಸುಂದರ ಚಿತ್ರವನ್ನು ಧರ್ಮ ವ ರಿಮೇಕ್ ಮಾಡುತ್ತಿದೆ ಎಂದು ಫೋಷಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಟಾಲಿವುಡ್ ಅಂಗಳದಲ್ಲಿ ಇದೊಂದು ದಾಖಲೆಯಾಗಿದ್ದು, ಇದುವರೆಗೂ ಯಾವುದೇ ಚಿತ್ರದ ರಿಮೇಕ್ ರೈಟ್ಸ್ ಇಷ್ಟೊಂದು ಮೊತ್ತಕ್ಕೆ ಮಾರಾಟವಾಗಿರಲಿಲ್ಲ ಎನ್ನಲಾಗಿದೆ. ಬಾಲಿವುಡ್‍ನಲ್ಲಿ ಸೌತ್ ಸಿನಿಮಾಗಳ ರಿಮೇಕ್ ಚಿತ್ರಗಳು ಅಬ್ಬರಿಸಲು ಆರಂಭಿಸಿದ್ದು, ಈಗಾಗಲೇ ಅಕ್ಷಯ್ ಕುಮಾರ್ ತಮಿಳಿನ ‘ವೀರಂ’ (ಬಚ್ಚನ್ ಪಾಂಡೆ), ‘ಕಾಂಚಾನಾ’ (ಲಕ್ಷ್ಮಿ ಬಾಂಬ್) ಚಿತ್ರಗಳನ್ನು ರಿಮೇಕ್ ಮಾಡಲು ಮುಂದಾಗಿದ್ದಾರೆ.
‘ಗೀತಾ ಗೋವಿಂದಂ’ ಚಿತ್ರದ ಮೂಲಕ ಟಾಲಿವುಡ್ ರೊಮ್ಯಾಂಟಿಕ್ ಜೋಡಿಯಾಗಿ ರಶ್ಮಿಕಾ ಹಾಗೂ ವಿಜಯ್ ಸಖತ್ ಫೇಮಸ್ ಆಗಿದ್ದರು. ಈ ಯುವ ಜೋಡಿ ಇದೀಗ ‘ಡಿಯರ್ ಕಾಮ್ರೇಡ್’ ಮೂಲಕ ಪ್ರೀತಿ ಸಂದೇಶವನ್ನು ಎತ್ತಿ ಹಿಡಿದಿದೆ. ಜುಲೈ 26ರಂದು ‘ಡಿಯರ್ ಕಾಮ್ರೇಡ್’ ಸಿನಿಮಾ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಪ್ರೇಕ್ಷಕರಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ.
ಡಿಯರ್ ಕಾಮ್ರೇಡ್ ಭರತ್ ಕಮ್ಮಾ ನಿದೇರ್ಶನದಲ್ಲಿ ಮೂಡಿ ಬಂದಿದ್ದು, ಚಿತ್ರ ಸ್ಟೂಡೆಂಟ್ ಯುನಿಯನ್ ಲೀಡರ್ ಓರ್ವ ಕ್ರಿಕೆಟ್ ಆಟಗಾರ್ತಿಗೆ ಮನಸೋತು, ಅವರಿಬ್ಬರ ನಡುವಿನ ಪ್ರೀತಿ, ಸಿಟ್ಟು, ಗಲಾಟೆಗಳ ರೋಮ್ಯಾಂಟಿಕ್ ಪ್ರೇಮ ಕಥನವಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ಕೆಮಿಸ್ಟ್ರಿಗೆ ಅಭಿಮಾನಿಗಳು ಮನಸೋತಿದ್ದಾರೆ. ಸದ್ಯ ಡಿಯರ್ ಕಾಮ್ರೆಡ್ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
https://twitter.com/karanjohar/status/1153656232084934658