ಕರಗ ಶಕ್ತೋತ್ಸವಕ್ಕೆ ರಾತ್ರಿ 12:30ಕ್ಕೆ ಚಾಲನೆ, ಸಿಎಂ-ಡಿಸಿಎಂ ಬರ್ತಾರೆ: ರಾಮಲಿಂಗಾರೆಡ್ಡಿ

Public TV
1 Min Read
Ramalinga Reddy

– ಬೆಂಗಳೂರು ಕರಗಕ್ಕೆ ಹಣ ಬಿಡುಗಡೆ ಗೊಂದಲಕ್ಕೆ ತೆರೆ ಎಳೆದ ಸಚಿವ

ಬೆಂಗಳೂರು: ಕರಗ (Bengaluru Karaga) ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ ಎಂದು ಗೊಂದಲಗಳಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತೆರೆ ಎಳೆದರು.

ಬೆಂಗಳೂರು ಕರಗ ಉತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪ ಕೇಳಿಬಂತು. ಈ ಹಿನ್ನೆಲೆಯಲ್ಲಿ ಕರಗ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಧರ್ಮರಾಯ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಇದನ್ನೂ ಓದಿ: ಕುಲಗೋಡ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಹ್ಲಾದ್ ಜೋಶಿ

Bengaluru Karaga Mahotsav

ಬಳಿಕ ಮಾತನಾಡಿದ ಅವರು, ಕರಗ ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ರಾಜ್ಯದ ಮುಖ್ಯಮಂತ್ರಿಗಳು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ. ನಾನೇ ಬಂದು ಎಲ್ಲ ವ್ಯವಸ್ಥೆ ನೋಡಿದ್ದೀನಿ. ಬಹಳ ಚೆನ್ನಾಗಿ ಮಾಡಿದ್ದಾರೆ. ಎಲ್ಲರೂ ಕೂಡ ಕರಗದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಕರಗ ಅಂದ್ರೆ ಬಹಳ ಫೇಮಸ್. ಪುಟ್ಟ ನಗರವಾದಾಗಿನಿಂದಲೂ ಕರಗ ನಡೀತಾ ಬರ್ತಾ ಇದೆ. ಲಕ್ಷಾಂತರ ಜನರು ಕರಗ ನೋಡಲು ಬರ್ತಾರೆ. ಶಾಸಕರು, ಪೊಲೀಸ್, ಬಿಬಿಎಂಪಿ ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಹಣ ಬಿಡುಗಡೆ ಗೊಂದಲ ವಿಚಾರವಾಗಿ ಮಾತನಾಡಿ, ಸಮಿತಿ ಅವಧಿ ಮುಗಿದಿದೆ. ಸಮಿತಿ ಅಧ್ಯಕ್ಷರು ಕೋರ್ಟ್‌ಗೆ ಹೋಗಿ ಪರ್ಮಿಷನ್ ತಂದಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಅವರಿಗೆ ಹಣ ಕಳಿಸುವಂತಿರಲಿಲ್ಲ. ಹೀಗಾಗಿ, ಎಡಿಸಿ ಜಗದೀಶ್ ನಾಯ್ಕ್ಗೆ ಖಾತೆಗೆ ಹಣ ಹಾಕಿದ್ದೀವಿ. ಕೋರ್ಟ್ ಆದೇಶದ ಪ್ರಕಾರವೇ ಮಾಡಿದ್ದೇವೆ. ಎ ಗ್ರೇಡ್ ದೇವಾಸ್ಥಾನದ ಉಸ್ತುವಾರಿ ನಾನು ನೋಡ್ಕೋತೀನಿ. ಈ ದೇವಸ್ಥಾನ ಬಿ ಗ್ರೂಪ್‌ಗೆ ಬರುತ್ತಾರೆ. ಹೀಗಾಗಿ ಬಿ ಗ್ರೇಡ್ ದೇವಸ್ಥಾನದ ಉಸ್ತುವಾರಿ ಜಿಲ್ಲಾಧಿಕಾರಿಗಳು ನೋಡಿಕೊಳ್ತಾರೆ. ಈಗ ಎಲ್ಲ ಗೊಂದಲ ಬಗೆಹರಿದಿದೆ. ಎಲ್ಲ ಒಗ್ಗಟ್ಟಾಗಿ ಕೆಲಸ ಮಾಡ್ತಾ ಇದ್ದಾರೆ ಎಂದರು. ಇದನ್ನೂ ಓದಿ: ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಅಂದ್ರೆ ತುಂಬಾನೇ ಇಷ್ಟ: ಶಿವಣ್ಣ

Share This Article