ಇಸ್ಲಾಮಾಬಾದ್: ಇಬ್ಬರು ಪತ್ನಿಯರಿದ್ದರೂ ಅವರ ಕಣ್ತಪ್ಪಿಸಿ, 3ನೇ ಮದುವೆಯಾಗಲು ಹೊರಟಿದ್ದ ಪತಿರಾಯನಿಗೆ ಮೊದಲ ಪತ್ನಿ ಮದುವೆ ಮಂಟಪಕ್ಕೆ ಬಂದು ಹಿಗ್ಗಾಮುಗ್ಗಾ ಹೊಡೆದಿದ್ದಾಳೆ.
ಪಾಕಿಸ್ತಾನದ ಕರಾಚಿಯ ನಜಿಮಾಬಾದಿನಲ್ಲಿ ಈ ಘಟನೆ ನಡೆದಿದೆ. ರಫೀಕ್ ಮೂರನೇ ಮದುವೆಗೆ ತಯಾರಾಗಿದ್ದ ಪತಿ. ಈಗಾಗಲೇ ಇಬ್ಬರು ಪತ್ನಿಯರಿದ್ದರೂ ಮೂರನೇ ಮದ್ವೆಗೆ ರಫಿಕ್ ಮುಂದಾಗಿದ್ದನು. ಈ ಬಗ್ಗೆ ಆತನ ಮೊದಲ ಪತ್ನಿ ಮದಿಹಾ ಹಾಗೂ ಆಕೆಯ ಕುಟುಂಬಸ್ಥರಿಗೆ ವಿಷಯ ತಿಳಿದಿದ್ದು, ತಕ್ಷಣ ಮದುವೆ ಮಂಟಪಕ್ಕೆ ನುಗ್ಗಿ ರಫೀಕ್‍ಗೆ ಥಳಿಸಿದ್ದಾರೆ. ಈ ಗಲಾಟೆಯಿಂದ ರಫೀಕ್‍ನ ಮೂರನೇ ಮದುವೆ ನಿಂತು ಹೋಗಿದೆ.
Advertisement
Advertisement
ರಫೀಕ್ ನನಗೆ ತಿಳಿಯದಂತೆ ಕದ್ದು-ಮುಚ್ಚಿ ಎರಡನೇ ಮದುವೆ ಆಗಿದ್ದ. ಆದರೆ ಈ ವಿಚಾರ ನನಗೆ ತಿಳಿದು ನಾನು ಜಗಳವಾಡಿದ್ದಾಗ ಕ್ಷಮೆ ಕೇಳಿ ನನ್ನ ಜೊತೆಯೇ ಇರುತ್ತೇನೆ ಎಂದಿದ್ದನು. ಅವನ ಮಾತು ಕೇಳಿ ನಾನು ಕ್ಷಮಿಸಿ ಸುಮ್ಮನಿದ್ದೆ. ಈಗ ಮೂರನೇ ಮದುವೆ ಆಗಲು ಮುಂದಾಗಿದ್ದಾನೆ ಎಂದು ಮದಿಹಾ ಆರೋಪಿಸಿದ್ದಾಳೆ.
Advertisement
Advertisement
ಆದರೆ ರಫೀಕ್ ಮಾತ್ರ, ನಾನು ಮದಿಹಾಗೆ ವಿಚ್ಛೇದನ ನೀಡಿದ್ದೇನೆ. ಇಬ್ಬರೂ ಮಾತನಾಡಿಕೊಂಡು ಬೇರೆ ಆಗಿದ್ದೇವೆ. ನಾನು ಮತ್ತೊಂದು ಮದುವೆ ಆಗೋಕೆ ಅವಳ ಒಪ್ಪಿಗೆ ಬೇಕಾಗಿಲ್ಲ. ವಿಚ್ಛೇದನ ಬಳಿಕ ಬೇರೆ ಮದುವೆ ಆಗಲು ನನಗೆ ಹಕ್ಕಿದೆ ಎಂದು ಆರೋಪವನ್ನು ತಳ್ಳಿಹಾಕಿದ್ದಾನೆ.
A man trying to marry for third time was caught by her first wife during his valima reception in #Karachi. He was later thrashed and arrested from the wedding hall. pic.twitter.com/sIHME2b14R
— azhar khan (@azharkhn4) February 11, 2020
ಸದ್ಯ ಮದುವೆ ಮಂಟಪದಲ್ಲಿ ನಡೆದ ರಂಪಾಟದ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.