ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ (Karachi, Pakistan) ನಗರದಲ್ಲಿ ನಿಗೂಢ ಸಾವಿನಿಂದ ಸಂಚಲನ ಸೃಷ್ಟಿಯಾಗಿದೆ. ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಒಟ್ಟು 22 ಮೃತದೇಹಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಂಗಳವಾರ 5 ಹೊಸ ಶವಗಳು ಪತ್ತೆಯಾಗಿದ್ದು, ಈ ಮೂಲಕ ಮೃತ ದೇಹಗಳ ಸಂಖ್ಯೆ ಈಗ 22 ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ವರದಿಯಾಗಿದೆ. ಪಾಕಿಸ್ತಾನಿ ಎನ್‌ಜಿಒಗಳ ಪ್ರಯತ್ನಗಳ ಹೊರತಾಗಿಯೂ 22 ದೇಹಗಳಲ್ಲಿ ಯಾವುದನ್ನೂ ಗುರುತಿಲು ಸಾಧ್ಯವಾಗಿಲ್ಲ ಎಂಬುದಾಗಿ ವರದಿಯಾಗಿದೆ. ಸದ್ಯ ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಈ ನಿಗೂಢ ಸಾವುಗಳ ಬಗ್ಗೆ ಕಳವಳವೂ ಹೆಚ್ಚಿದೆ.
ವರದಿಯ ಪ್ರಕಾರ, ವಿಪರೀತ ಬಿಸಿಲಿ ಕಾರಣ ಈ ಸಾವುಗಳು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಬಂದರು ನಗರವಾಗಿರುವ ಕರಾಚಿಯಲ್ಲಿ ಬಿಸಿಲಿನ ತಾಪಕ್ಕೆ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಗರದ ಅನೇಕ ನಾಗರಿಕರು ಈ ಬಿಸಿಲಿನ ಶಾಖಕ್ಕೆ ತುತ್ತಾಗಿದ್ದರೆ, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಶವವಾಗಿ ಪತ್ತೆಯಾಗಿರುವ ಇವರ ಸಾವಿಗೆ ಇನ್ನೊಂದು ಕಾರಣವನ್ನು ಹೇಳಲಾಗುತ್ತಿದೆ. ಮಾದಕ ವ್ಯಸನದಿಂದ ಕೂಡ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ
ಕರಾಚಿಯ ಈಧಿ ಫೌಂಡೇಶನ್‌ನ ಅಧಿಕಾರಿ ಅಜೀಮ್ ಖಾನ್ ಅವರು, ಮೃತರಲ್ಲಿ ಹೆಚ್ಚಿನವರು ಮಾದಕ ವ್ಯಸನಿಗಳಾಗಿದ್ದಾರೆ. ಮತ್ತು ಅವರು ಬಿಸಿಲಿನ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಹಿರಿಯ ನಾಗರಿಕರೊಬ್ಬರು ಮಾದಕ ವ್ಯಸನ ಮಾರಾಟ ನಿಲ್ಲಿಸಿದಾಗ, ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಈ ಘಟನೆಯು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ ಎಂದರು.