ಉಡುಪಿ: ಜಿಲ್ಲೆಯ ಕಾಪು ಪುರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಪುರಸಭೆಯ 23 ವಾರ್ಡಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 12 ಸ್ಥಾನಗಳನ್ನು ಗೆದ್ದುಕೊಂಡಿದೆ.
ಕಾಪು ವಿಧಾನಸಭಾ ಶಾಸಕ ಲಾಲಾಜಿ ಮೆಂಡನ್ ಗೆ ಪ್ರತಿಷ್ಠೆಯ ಕಣವಾಗಿದ್ದ ಕಾಪು ಪುರಸಭೆಯಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ. ಕಾಂಗ್ರೆಸ್ಸಿಗೆ 7 ಸ್ಥಾನ ಎಸ್‍ಟಿಪಿಐಗೆ 3 ಸ್ಥಾನ, ಜೆಡಿಎಸ್‍ಗೆ ಒಂದು ಸ್ಥಾನಗಳಲ್ಲಿ ಗೆಲುವಾಗಿದೆ. ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಹತ್ತು ಗುಂಪುಗಳು ಎಂದು ಚರ್ಚೆ ನಡೆಯುತ್ತಿತ್ತು.
Advertisement
Advertisement
ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನಿಲ್ ಕುಮಾರ್ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಕಳೆದ ಅವಧಿಯಲ್ಲಿ ಮೊದಲ ಎರಡುವರೆ ವರ್ಷ ಕಾಂಗ್ರೆಸ್ ಅಧಿಕಾರ ಮಾಡಿತ್ತು. ಸುಮಾರು ಒಂದುವರೆ ವರ್ಷ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷಾಚರಣೆ ತಡೆಗೆ ಮತ್ತಷ್ಟು ಟಫ್ ರೂಲ್ಸ್ – ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ 50:50 ರೂಲ್ಸ್ ಜಾರಿ
Advertisement
Advertisement
ಕಡೆಯ 8 ತಿಂಗಳು ಶಾಸಕ ಲಾಲಾಜಿ ಮೆಂಡನ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮಾತ ಚಲಾಯಿಸುವುದರ ಮೂಲಕ ಬಿಜೆಪಿ ಅಧಿಕಾರ ನಡೆಸಿತ್ತು. ಇದೀಗ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಕಾಪು ಪುರಸಭೆಯ ಗದ್ದುಗೆಯೇರಿದೆ. ಫಲಿತಾಂಶಗಳು ಬರುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಬಿಜೆಪಿ ಬಹುಮತ ಪಡೆದಿರುವುದರಿಂದ ಮತ ಎಣಿಕೆ ಕೇಂದ್ರದಿಂದ ವಿಜಯೋತ್ಸವ ಮೆರವಣಿಗೆ ಮಾಡಿದೆ.