BollywoodCinemaLatestNational

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಪಿಲ್ ಶರ್ಮಾ

ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಪಿಲ್ ಶರ್ಮಾ ಶೋ’ ಮೂಲಕ ಖ್ಯಾತರಾಗಿರುವ ಹಾಸ್ಯನಟ, ನಿರೂಪಕ ಕಪಿಲ್ ಶರ್ಮಾ ತಮ್ಮ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಪಿಲ್ ಶರ್ಮಾ ತನ್ನ ಗೆಳತಿ ಗಿನ್ನಿ ಚಾತ್ರಥ್ ಜೊತೆ ಆಕೆಯ ಮನೆಯಲ್ಲೇ ಸಿಖ್ ಸಂಪ್ರದಾಯದ ಪ್ರಕಾರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಕಪಿಲ್ ಬಿಳಿ ಹಾಗೂ ಪಿಂಕ್ ಬಂದ್‍ಗಲ ಧರಿಸಿದ್ದರೆ, ಗಿನ್ನಿ ಪಿಂಗ್ ಲೆಹೆಂಗಾ ಧರಿಸಿ ಮಿಂಚಿದ್ದಾರೆ.

kapil sharma 3

ಪಂಜಾಬ್‍ನ ಜಲಂದರ್ ನಲ್ಲಿರುವ ಪಾಗ್ವಾರಾದಲ್ಲಿ ಬುಧವಾರ ಕಪಿಲ್ ಹಾಗೂ ಗಿನ್ನಿ ಮದುವೆಯಾಗಿದ್ದರು. ಮದುವೆಯಾದ ನಂತರ ಇಬ್ಬರು ಆನಂದ್ ಕರಾಜ್ ಕಾರ್ಯಕ್ರಮದಲ್ಲಿ (ಪಂಜಾಬಿ ಸಂಪ್ರದಾಯದಲ್ಲಿ ನಡೆಯುವ ಶಾಸ್ತ್ರ) ಭಾಗಿಯಾಗಿದ್ದರು.

ಕೃಷ್ಣಾ ಅಭಿಷೇಕ್, ಸುಮೌನ ಚಕ್ರವರ್ತಿ, ಭಾರತಿ ಸಿಂಗ್ ಹಾಗೂ ಇನೂ ಕೆಲವು ಬಾಲಿವುಡ್ ಕಲಾವಿದರು ಕಪಿಲ್ ಮದುವೆಯಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಕೋರಿದರು. ಮೂಲಗಳ ಪ್ರಕಾರ ಕಪಿಲ್ ತನ್ನ ಸಂಬಂಧಿಕರಿಗೆ ಅಮೃತ್ ಸರ್‍ನಲ್ಲಿ ಆರತಕ್ಷತೆ ಹಾಗೂ ಚಿತ್ರರಂಗದ ಸ್ನೇಹಿತರಿಗೆ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *