Bollywood
ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

ಮುಂಬೈ: ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ. ಖಾಸಗಿ ಚಾನಲೆ ಒಂದರಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ತಾವು ಪ್ರೀತಿಸುತ್ತಿರುವ ಹುಡುಗಿ ಫೋಟೋ ಟ್ವೀಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಪ್ರತಿ ಶನಿವಾರ ಮತ್ತು ಭಾನುವಾರ ತಮ್ಮ ಶೋ ಮೂಲಕ ಎಲ್ಲರನ್ನೂ ನಗಿಸುವ ಕಪಿಲ್ ಶರ್ಮಾ ಇದೀಗ ತಮ್ಮ ಪ್ರೇಯಸಿಯ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಶೋಗೆ ಬರುವ ನಟಿಯರನ್ನ ರೇಗಿಸುತ್ತಾ ತಮಾಷೆ ಮಾಡೋ ಕಪಿಲ್ ಕೊನೆಗೂ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಹಾಯ್, ನಾನೊಂದು ಸುಂದರವಾದ ವಿಷಯವನ್ನ ನಿಮ್ಮೊಂದಿಗೆ ಹಂಚಿಕೊಳ್ಬೇಕು. 30 ನಿಮಿಷ ಕಾಯಿರಿ ಎಂದು ಕಪಿಲ್ ಟ್ವೀಟ್ ಮಾಡಿದ್ರು. ಅನಂತರ ಎರಡು ಫೋಟೋಗಳ ಸಮೇತ ಟ್ವೀಟ್ ಮಾಡಿ ತಮ್ಮ ಪ್ರೇಯಸಿ ಯಾರೆಂಬುದನ್ನ ಬಹಿರಂಗಪಡಿಸಿದ್ರು.
Hi..want to share something very beautiful thing with u guys …wait for 30 mins ..
— Kapil Sharma (@KapilSharmaK9) March 18, 2017
ಈ ಫೋಟೋದಲ್ಲಿರುವ ಮಹಿಳೆ ನನ್ನ ಅರ್ಧಾಂಗಿ ಎಂದು ಹೇಳಲ್ಲ. ಇವಳು ನನ್ನನ್ನು ಪರಿಪೂರ್ಣಳಾಗಿಸುತ್ತಾಳೆ. ಲವ್ ಯೂ ಗಿನ್ನಿ. ದಯವಿಟ್ಟು ಈಕೆಯನ್ನು ಸ್ವಾಗತಿಸಿ. ನಾನಿವಳನ್ನು ತುಂಬಾ ಪ್ರೀತಿಸ್ತೀನಿ ಎಂದು ಟ್ವೀಟ್ ಮಾಡಿದ್ದಾರೆ.
Will not say she is my better half .. she completes me .. love u ginni .. please welcome her .. I love her so much:) pic.twitter.com/IqB6VKauM5
— Kapil Sharma (@KapilSharmaK9) March 18, 2017
ಶೋದಲ್ಲಿ ಪ್ರತಿಬಾರಿಯೂ ನಾನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯನ್ನು ಪ್ರೀತಿಸುತ್ತೇನೆ. ಆಯ್ ಲವ್ ದೀಪಿಕಾ ಎಂದು ಹೇಳುತ್ತಿದ್ದ ಕಪಿಲ್ ಕೊನೆಗೆ ಒಂದು ಟ್ವೀಟ್ ಮಾಡಿ, ದೀಪು ಇನ್ಮುಂದೆ ನಾನು ನಿನ್ನನ್ನು ಮಿಸ್ ಮಾಡುವುದಿಲ್ಲ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ
.
@deepikapadukone deepu… now m not gona miss u .. hahahahaha.. love always pic.twitter.com/9cjQKiiEvj
— Kapil Sharma (@KapilSharmaK9) March 18, 2017
ಕಪಿಲ್ ಹಾಗೂ ಗಿನ್ನಿ ಚತ್ರಾತ್ ಕಾಲೇಜು ದಿನಗಳಿಂದಲೂ ಒಬ್ಬರಿಗೊಬ್ಬರು ಪರಿಚಯವಿದ್ದರು. ಆದರೂ ಇವರಿಬ್ಬರೂ ಹತ್ತಿರವಾಗಿದ್ದು ಪ್ರಖ್ಯಾತ ಶೋ ಹಸ್ ಬಲ್ಲಿಯೇ ಚಿತ್ರೀಕರಣದ ವೇಳೆ. ಕಪಿಲ್ ನಿರ್ದೇಶನದ ಇತರೆ ಕೆಲವು ಶೋಗಳಲ್ಲೂ ಗಿನ್ನಿ ಕಾಣಿಸಿಕೊಂಡಿದ್ದರು.
