ಬೆಂಗಳೂರು: ಹೊಸ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಅಲ್ಲಿ ಹೊಸತನದ ಜಾತ್ರೆಯೇ ನೆರೆಯುತ್ತದೆಂಬಂಥಾ ನಂಬಿಕೆ ಕನ್ನಡ ಪ್ರೆಕ್ಷಕರಲ್ಲಿದೆ. ಇತ್ತೀಚೆಗೆ ಬಂದ ಬಹುತೇಕ ಹೊಸ ತಂಡಗಳು ಇಂಥಾ ವಿಶಿಷ್ಟ ಕಂಟೆಂಟಿನ ಸಿನಿಮಾಗಳ ಮೂಲಕ ಈ ನಂಬಿಕೆಯನ್ನು ಗಟ್ಟಿಗೊಳಿಸಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಮೂಲಕವೇ ಮತ್ತೊಂದು ಹೊಸಾ ತಂಡದಿಂದ ರೂಪಿಸಲ್ಪಟ್ಟಿರೋ ‘ಕಪಟನಾಟಕ ಪಾತ್ರಧಾರಿ’ ಎಂಬ ಚಿತ್ರ ಸೌಂಡು ಮಾಡಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಮತ್ತೆ ಪ್ರೇಕ್ಷಕರನ್ನಾವರಿಸಿಕೊಂಡಿದೆ.
Advertisement
ಈ ಹಾಡನ್ನು ಸಂಗೀತ ನಿರ್ದೇಶಕ ಆದಿಲ್ ನದಾಫ್ ರೂಪಿಸಿರೋ ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಹಸಿದಾ ಶಿಕನು ಬೇಟೆಯಾಡಿದೆ ಒಡಲಾ ಕಸಿದು ಸೂರೆ ಮಾಡಿದೆ ಎಂಬ ಈ ಹಾಡನ್ನು ಚಾಣಕ್ಯ ಬರೆದಿದ್ದಾರೆ. ಇಶಾ ಸುಚಿ ಅಷ್ಟೇ ಆಪ್ತವಾಗಿ ಇದಕ್ಕೆ ಧ್ವನಿಯಾಗಿದ್ದಾರೆ. ಸಾಹಿತ್ಯದಲ್ಲಿಯೇ ವಿಶೇಷವಾದ ಅಂಶಗಳನ್ನೊಳಗೊಂಡಿರೋ ಈ ಹಾಡನ್ನು ಆದಿಲ್ ನದಾಫ್ ಅದಕ್ಕೆ ತಕ್ಕುದಾದ ಸಂಗೀತ ಸ್ಪರ್ಶದೊಂದಿಗೆ ಸಮ್ಮೋಹಕವಾಗಿ ರೂಪಿಸಿದ್ದಾರೆ. ಒಂದೇ ಸಲಕ್ಕೆ ಇಷ್ಟವಾಗುವಂತಿರೋ ಈ ಲಿರಿಕಲ್ ಸಾಂಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿಯೇ ಹರಿದಾಡುತ್ತಿದೆ. ಇದನ್ನೂ ಓದಿ: ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!
Advertisement
Advertisement
ವಿಶೇಷವೆಂದರೆ, ಕಪಟನಾಟಕ ಪಾತ್ರಧಾರಿ ತಂಡ ಈ ಹಾಡುಗಳ ಮೂಲಕವೇ ಕಥೆಯ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂಥಾ ಪಟ್ಟುಗಳನ್ನು ಪ್ರದರ್ಶಿಸುತ್ತಿದೆ. ಕಳೆದ ಬಾರಿ ಬಂದಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಸಾಂಗ್ ಮತ್ತು ಈಗ ಬಿಡುಗಡೆಯಾಗಿರೋ ಈ ಹಾಡು ಕೂಡಾ ಕಥೆಯ ಬಗ್ಗೆಯೇ ಪ್ರೇಕ್ಷಕರ ದೃಷ್ಟಿ ಹೊರಳುವಂತೆ ಮಾಡುವಲ್ಲಿ ಗೆದ್ದಿವೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿರೋ ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಸಂಗೀತ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ.