ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ ಚಾಪ್ಟರ್ 1’ರ (Kantara Chapter 1) ಟೀಸರ್ (Teaser) ಭಾರೀ ಸದ್ದು ಮಾಡುತ್ತಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲು ವ್ಯೂಸ್ ಪಡೆದುಕೊಳ್ಳುತ್ತಿದೆ. ಈ ಟೀಸರ್ ಅನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ತಮ್ಮದೇ ಆದ ಕಲ್ಪನೆಯಲ್ಲಿ ಅದನ್ನು ವಿಶ್ಲೇಷಿಸಿದ್ದಾರೆ.
Advertisement
ಮೇಲ್ನೋಟಕ್ಕೆ ರಿಷಬ್ (Rishabh Shetty) ಪಾತ್ರದ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡಿದ್ದರೆ ಮತ್ತೊಂದು ಕೈಯಲ್ಲಿ ತ್ರಿಶೂಲವಿದೆ. ಒಂದು ಫ್ರೇಮ್ ನ ಬೆಳಕಿನಲ್ಲಿ ಶಿವಲಿಂಗದ ಚಿತ್ರಣವನ್ನೂ ತೋರಿಸಲಾಗಿದೆ. ಪಂಜುರ್ಲಿ ದೈವ ಶಿವನ ಜೊತೆ ಇರುವಂಥದ್ದು. ಹಾಗಾಗಿ ಪಂಜುರ್ಲಿ ದೈವದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಸಿನಿಮಾ ಸಂಸ್ಥೆಯೇ ಹೇಳಿಕೊಂಡಂತೆ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನೂ ಅನುಭವಿಸುವ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ, ಇದು ಬರಿ ಬೆಳಕಲ್ಲ, ದರ್ಶನ ಎಂದು ಬರೆದುಕೊಂಡಿತ್ತು. ಈ ಎಲ್ಲವನ್ನೂ ಗಮನಿಸಿ ಮತ್ತೊಂದು ದೃಷ್ಟಿ ಕೋನದಲ್ಲೂ ಈ ಟೀಸರ್ ಅನ್ನು ಬಣ್ಣಿಲಸಾಗುತ್ತಿದೆ.
Advertisement
ಡೆಕ್ಸಟರ್ ಮಾರ್ಗನ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ‘ಬೆಂಕಿಯು ಕಾನನ ಬೆಳಗಿಸಲಿಲ್ಲ. ಬದಲಾಗಿ ಬೆಂಕಿ ಮತ್ತಷ್ಟು ಕತ್ತಲೆ ತಂದಿಟ್ಟಿತ್ತು’ ಎನ್ನುತ್ತಲೇ ಬೆಂಕಿಯ ಉಂಗುರ ಕಪ್ಪು ಕುಳಿಯನ್ನು ಹೋಲುತ್ತದೆ. ಕಪ್ಪು ಕುಳಿ ಬೆಳಕನ್ನು ಒಳಗೊಂಡಂತೆ ಹೀರಿಕೊಳ್ಳುತ್ತದೆ. ಈ ವಿವರಣೆಯು ಜಗತ್ತಿನ ಮತ್ತೊಂದು ಹೆಬ್ಬಾಗಿಲು ಆಗಲಿದೆ ಎಂದು ವಿಶ್ಲೇಷಿಸಿದ್ದಾರೆ. ಇವರೇ ಮತ್ತೊಂದು ಕಡೆ ಬರೆದುಕೊಂಡಂತೆ ‘ನಾವು ರಿಂಗ್ ಆಫ್ ಫಯರ್ ಉನ್ನತ ಮಟ್ಟವನ್ನು ಕಂಡಿದ್ದೇವೆ. ಆದರೆ, ಕೆಳಗಿರುವ ಶಕ್ತಿಗಳಿಗೆ ಇನ್ನೂ ನಾವು ಸಾಕ್ಷಿಯಾಗಬೇಕಿದೆ’ ಎಂದು ಹೇಳುವ ಮೂಲಕ ಹೊಸ ಚಿಂತನೆಗೆ ಹಚ್ಚಿದ್ದಾರೆ.
ಪೋಸ್ಟರ್ (Poster) ಕೂಡ ಹತ್ತು ಹಲವು ಸಂಗತಿಯೊಂದಿಗೆ ಮಿಶ್ರಣಗೊಂಡಿದೆ. ಪೋಸ್ಟರ್ ನಲ್ಲಿ ಕಾಂತಾರದ ಉರಿಯುತ್ತಿರುವ ಬೆಂಕಿ ರಿಂಗ್ ಕಾಣಿಸಿಕೊಂಡಿದೆ. ಲಿಂಗವನ್ನು ಸುತ್ತಿಕೊಂಡ ಹಾವು, ದಾಳಿ ಕೋರರು, ತುಂಡರಿಸಿದ ಕಾಲು, ವರಹಾ, ಕೋಣ, ಸಾರಂಗ, ಹುಲಿ, ಕಾಳಿಂಗ ಸರ್ಪ ಹೀಗೆ ಹತ್ತಾರು ಸಂಗತಿಗಳಿವೆ.