– ಡಿಜೆ ಸಂಸ್ಕೃತಿಗೂ ಕಡಿವಾಣ
ಮಂಗಳೂರು: ಕಾಂತಾರ (Kantara) ಸಿನಿಮಾ ಕರಾವಳಿಯ ದೈವಗಳ ಪ್ರಸಿದ್ಧಿಯನ್ನು ವಿಶ್ವದಾದ್ಯಂತ ಪಸರಿಸಿತ್ತು. ಆದರೆ ಈ ಸಿನಿಮಾದ ಕಾರಣಕ್ಕೆ ಇದೇ ದೈವಗಳು ಕೆಲವರಿಗೆ ತಮಾಷೆಯ ವಸ್ತುವಾಗಿದೆ. ಬೀದಿ ಬೀದಿಯಲ್ಲೂ ದೈವಗಳ ವೇಷ ಹಾಕಿ ಅವಮಾನ ಮಾಡೋ ಪ್ರಕರಣಗಳೂ ನಡೆದಿದೆ. ಹೀಗಾಗಿಯೇ ಈ ಬಾರಿಯ ಮಂಗಳೂರು ದಸರಾದಲ್ಲಿ (Mangaluru Dasara) ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ. ಡಿಜೆ ಸಂಸ್ಕೃತಿಗೂ ಕಡಿವಾಣ ಹಾಕುವ ಮೂಲಕ ವಿಭಿನ್ನ ದಸರಾ ಆಚರಣೆಗೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಆಡಳಿತ ಹೊಸ ಹೆಜ್ಜೆ ಇಟ್ಟಿದೆ.
Advertisement
ಹೌದು. ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ (Kudroli Temple) ಶ್ರೀಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ಅಕ್ಟೋಬರ್ 25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಖಡಕ್ ನಿರ್ಧಾರ ತಳೆದಿದೆ. ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ (Tableau) ಅವಕಾಶ ನೀಡುತ್ತಿಲ್ಲ. ಆದ್ದರಿಂದ ಇಂತಹ ಟ್ಯಾಬ್ಲೊಗಳು ಬಂದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ. ಯಾವುದೇ ಜಾತಿ, ಧರ್ಮ, ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೊಗಳಿಗೂ ಅವಕಾಶ ಕೊಡುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ನವರಾತ್ರಿ 2023: ಬ್ರಹ್ಮಚಾರಿಣಿ ದೇವಿಯ ಹಿನ್ನೆಲೆ ಏನು?
Advertisement
Advertisement
ಈ ಬಾರಿಯ ಮಂಗಳೂರು ದಸರಾದ ಮೆರವಣಿಗೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಡಿಜೆಗೆ ನಿಷೇಧ ಹಾಕಲಾಗಿದ್ದು, ಭಜನಾ ತಂಡಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ನೂರಾರು ಟ್ಯಾಬ್ಲೋಗಳು ಭಾಗವಹಿಸೋ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸಾಮರಸ್ಯದ ದಸರಾಕ್ಕೆ ಈ ಬಾರಿ ಮಂಗಳೂರು ದಸರಾ ಸಾಕ್ಷಿಯಾಗಲಿದೆ.ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಕ್ರೈಸ್ತ ಧರ್ಮದವರು ಸೇರಿದಂತೆ ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ತರಲಿದ್ದಾರೆ. ಮಂಗಳೂರು ದಸರಾದಲ್ಲಿ ಪ್ರತೀ ವರ್ಷ ಒಂದೊಂದು ವಿಶೇಷವಿರುತ್ತದೆ. ಈ ಬಾರಿ ಅಕ್ಟೋಬರ್ 15ರಂದು ರಾತ್ರಿ 8ಗಂಟೆಗೆ ಶ್ರಿಕ್ಷೇತ್ರದಿಂದ ಮಂಗಳೂರು ದಸರಾ ಮ್ಯಾರಥಾನ್ ನಡೆಯಲಿದೆ. ಜ್ಯೂಯೀಸ್ ಫಿಟ್ ನೆಸ್ ಕ್ಲಬ್ ಹಾಗೂ ಶ್ರೀಕ್ಷೇತ್ರ ಜೊತೆಯಾಗಿ ಸೇರಿ ಈ ಮ್ಯಾರಥಾನ್ ನಡೆಸಲಿದೆ. ಸಾವಿರಾರು ಮಂದಿ ಈ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
ಒಟ್ಟಾರೆ ದೈವಗಳ ಅವಹೇಳನ ವಿರುದ್ಧ ಈ ಬಾರಿಯ ಮಂಗಳೂರು ದಸರಾ ಹೊಸ ಸಂದೇಶ ಸಾರಿದೆ. ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆ ಇದೀಗ ಭಾರೀ ಪ್ರಸಂಶೆಗೆ ಕಾರಣವಾಗಿದೆ.
Web Stories