ಇತ್ತೀಚೆಗೆ ಸ್ಯಾಂಡಲ್‌ವುಡ್ (Sandalwood) ಹಾಗೂ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿದ ವಿಷ್ಯ ಅಂದ್ರೆ ಥಿಯೇಟರ್‌ಗೆ ಜನ ಬರುತ್ತಿಲ್ಲ ಅನ್ನೋದು. ಈ ಕುರಿತು ತೆಲುಗು ಚಿತ್ರರಂಗ 12 ದಿನಗಳ ಕಾಲ ಥಿಯೇಟರ್ ಬಂದ್ ಕೂಡ ಮಾಡಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲೂ ಥಿಯೇಟರ್ ಬಂದ್ ಮಾಡುವ ಬಿಸಿ ಬಿಸಿ ಚರ್ಚೆಗಳು ಶುರುವಾಗಿತ್ತು. ಥಿಯೇಟರ್‌ಗೆ ಜನ ಬರುತ್ತಿಲ್ಲ, ಥಿಯೇಟರ್ ನೋಡಿಕೊಳ್ಳೋಕೆ ತುಂಬಾ ಸಮಸ್ಯೆ ಆಗುತ್ತಿದೆ. ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ ಅಂತೆಲ್ಲ ಆರೋಪಗಳು ಕೇಳಿ ಬಂದಿತ್ತು.
ಇದಾದ ಬಳಿಕ ಫಿಲ್ಮ್ ಚೇಂಬರ್‌ನಲ್ಲಿ ಚರ್ಚೆಗಳು, ಸಭೆಗಳು, ನಿರ್ಮಾಪಕರ ವಲಯ, ಹಂಚಿಕೆದಾರರ ವಲಯ ಹೀಗೆ ಥಿಯೇಟರ್ ಸಮಸ್ಯೆ ಹಾಗೂ ಥಿಯೇಟರ್ ಬಂದ್ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿತ್ತು. ಚರ್ಚೆಯ ನಂತರ ಥಿಯೇಟರ್ ಬಂದ್ ಕಾನ್ಸೆಪ್ಟ್‌ಗೆ ಬ್ರೇಕ್ ಹಾಕಲಾಯ್ತು. ಇದಾದ ಮರುದಿನವೇ ‘ಡೆವಿಲ್’ (Devil) ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ನಂತರ ಧ್ರುವ ಸರ್ಜಾ ನಟನೆಯ ಎರಡು ಸಿನಿಮಾಗಳು ಇದೇ ವರ್ಷ ತೆರೆಗೆ ಬರುವ ದಿನಾಂಕವನ್ನ ಖಚಿತಪಡಿಸಿವೆ.
ಇದೀಗ ಥಿಯೇಟರ್‌ಗೆ ಜನ ಬರುತ್ತಿಲ್ಲ ಅನ್ನುವ ಮಾತಿಗೆ ನಟ ರಿಷಬ್ ಶೆಟ್ಟಿ (Rishab Shetty) ಪ್ರತಿಕ್ರಿಯೆ ನೀಡಿದ್ದಾರೆ. ‘ಕೆಲವು ಸಲ ಮ್ಯಾಚ್ ಸೋಲ್ತೀವಿ. ಕೆಲವು ಸಲ ಚೆನ್ನಾಗಿ ಹಿಟ್ ಆಗಿರುವ ಮ್ಯಾಚ್‌ನಲ್ಲಿ ಗ್ರೌಂಡ್‌ನಲ್ಲಿ ಜನ ಇರೋಲ್ಲ’. ನೀವು ಬಿಟ್ಟುಕೊಡಬೇಡಿ, ನಾವು ಬಿಟ್ಟುಕೊಡುವುದಿಲ್ಲ. ಒಳ್ಳೆಯ ಸಿನಿಮಾ ಬಂದಾಗ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ. ನಿಮ್ಮ ಹಾರೈಕೆ ಇದ್ದರೆ ಮಾತ್ರ ಕನ್ನಡ ಚಿತ್ರರಂಗ ಬೆಳೆಯೋಕೆ ಸಾಧ್ಯವಾಗುತ್ತದೆ ಅಂತ ಮನವಿ ಮಾಡಿದ್ದಾರೆ.
ಸದ್ಯ ‘ಕಾಂತಾರ’ ಚಾಪ್ಟರ್ 1 (Kantara 1) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ನಟ ರಿಷಬ್ ಶೆಟ್ಟಿ, ಈಗ ಈ ಚಿತ್ರದ ಬಗ್ಗೆ ಸುಳಿವು ಮಾತ್ರ ಎಲ್ಲೂ ಬಿಟ್ಟುಕೊಟ್ಟಿಲ್ಲ. ‘ಕಾಂತಾರ’ ಪ್ರೀಕ್ವೆಲ್ ಸುಳಿವಿನ ಬಗ್ಗೆ ಕೇಳಿದಾಗ ‘ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ’. ಅಂತಾ ಜಾಣ್ಮೆಯಿಂದಲೇ ಅಭಿಮಾನಿ ಬಳಗಕ್ಕೆ ಉತ್ತರ ನೀಡಿದ್ದಾರೆ.