ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ `ಕಾಂತಾರ’ (Kantara) ಚಿತ್ರದ ಹವಾ ಇನ್ನೂ ಮುಗಿದಿಲ್ಲ. ಕಾಂತಾರ ಪಾರ್ಟ್ 2ಗೆ ಪಂಜುರ್ಲಿ ದೈವದ ಕಡೆಯಿಂದ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರನ್ನ ರಿಷಬ್ ಶೆಟ್ಟಿ (Rishab Shetty) ಭೇಟಿಯಾಗಿದ್ದಾರೆ.
ʻಕಾಂತಾರʼ ಸೂಪರ್ ಸಕ್ಸಸ್ ಕಂಡಿದೆ. ಚಿತ್ರಮಂದಿರದಲ್ಲಿ ಮೋಡಿ ಮಾಡಿದ ಬಳಿಕ ಒಟಿಟಿಯಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಇತ್ತೀಚೆಗೆ `ಕಾಂತಾರ 2′ ಮಾಡಲು ಪಂಜುರ್ಲಿ ದೈವ ಬಳಿ ಅನುಮತಿ ಕೇಳಿದ್ದಾರೆ. ದೈವ ಕೂಡ ಸಾಕಷ್ಟು ಸಲಹೆ ನೀಡಿ, ಶುಭಹಾರೈಸಿ ಕಾಂತಾರ ಭಾಗ 2 (Kantara 2) ಮಾಡಲು ಸಮ್ಮತಿ ಸೂಚಿಸಿದ್ದಾರೆ. ಇದಾದ ಬಳಿಕ ಉತ್ತರಾಖಂಡ ಸಿಎಂ ಅವರನ್ನು ರಿಷಬ್ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ
.@shetty_rishab & The CM of Uttarakhand @pushkardhami sir in conversation about #Kantara#RishabShetty #PushkarSinghDhami pic.twitter.com/0CSrRieHFK
— KRG Connects (@KRG_Connects) December 11, 2022
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರನ್ನ ರಿಷಬ್ ಭೇಟಿಯಾಗಿ ʻಕಾಂತಾರʼ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನ ಮಾತನಾಡಿದ್ದಾರೆ. ಈ ಕುರಿತ ಫೋಟೋವನ್ನ ಕೆಆರ್‌ಜಿ ಸಂಸ್ಥೆ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ `ಕಾಂತಾರ’ ಪಾರ್ಟ್ 2 ಬಗ್ಗೆ ಸಿಹಿಸುದ್ದಿ ಕೇಳಿರುವ ಫ್ಯಾನ್ಸ್, ಸಿನಿಮಾಗಾಗಿ ಕಾಯ್ತಿದ್ದಾರೆ.