ಕನ್ನಡದ ಸೂಪರ್ ಹಿಟ್ ಎರಡು ಚಿತ್ರಗಳು ಬಾಲಿವುಡ್ ನ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿವೆ. ಕೆಜಿಎಫ್ 2 ಮತ್ತು ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಹೊತ್ತಿನಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಿಡುವಿಲ್ಲದಂತೆ ಸೋಷಿಯಲ್ ಮೀಡಿಯಾ ಮೂಲಕ ಒಬ್ಬರಿಗೊಬ್ಬರು ಕೆಸರೆರೆಚಿಕೊಳ್ಳುತ್ತಿದ್ದಾರೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.
Advertisement
ಸಂವಾದ ಕಾರ್ಯಕ್ರಮವೊಂದರಲ್ಲಿ ಅನುರಾಗ್ ಕಶ್ಯಪ್ ದಕ್ಷಿಣದ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ 2 ಮತ್ತು ಕಾಂತಾರ ರೀತಿಯ ಚಿತ್ರಗಳು ಸಿನಿಮಾ ರಂಗವನ್ನು ಮುಗಿಸಲಿವೆ ಎನ್ನುವಂತೆ ಹೇಳಿಕೆ ನೀಡಿದ್ದರು. ಬಾಲಿವುಡ್ ಸದ್ಯ ಹಿಂದುಳಿಯುವುದಕ್ಕೆ ಕಾರಣ ಇಂಥದ್ದೇ ಚಿತ್ರಗಳು ಎಂದು ಹೇಳಿದ್ದರು. ಈ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕರು ಕೂಡ ಅನುರಾಗ್ ಮಾತಿಗೆ ಗರಂ ಆಗಿದ್ದರು. ಇದನ್ನೂ ಓದಿ: ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ
Advertisement
Advertisement
ಅನುರಾಗ್ ಮಾತನ್ನು ನಾನು ಒಪ್ಪುವುದಿಲ್ಲ. ಅವರು ಈ ರೀತಿಯಲ್ಲಿ ಮಾತನಾಡಬಾರದಿತ್ತು. ಮಾತನಾಡುವವರು ಸಿನಿಮಾ ಮಾಡಿ ತೋರಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಅನುರಾಗ್, ದಿ ಕಾಶ್ಮೀರ್ ಫೈಲ್ಸ್ ನಿಮ್ಮಂತೆಯೇ ಸುಳ್ಳು ಹೇಳುತ್ತಿದೆ. ಅಲ್ಲಿರುವುದು ಎಲ್ಲವೂ ಸುಳ್ಳು ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿದ್ದರು. ಈ ಬರಹ ವಿವೇಕ್ ಅಗ್ನಿಹೋತ್ರಿಯನ್ನು ಕೆಣುಕುವಂತೆ ಮಾಡಿತ್ತು.
Advertisement
ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಕಾಮೆಂಟ್ ಮಾಡಿದ್ದ ಅನುರಾಗ್ ಕಶ್ಯಪ್ ಗೆ ಮತ್ತೆ ತಿರುಗೇಟು ನೀಡಿರುವ ವಿವೇಕ್, ‘ನಾನು ಮಾಡಿದ ಸಿನಿಮಾದಲ್ಲಿ ಯಾವುದು ತಪ್ಪು, ಯಾವುದನ್ನು ಸುಳ್ಳು ಹೇಳಿದ್ದೇನೆ ಅಂತ ಸಾಬೀತು ಪಡಿಸಿ. ನಾನು ಸುಳ್ಳು ಹೇಳಿದ್ದೇನೆ, ನನ್ನ ಸಂಶೋಧನೆ ತಪ್ಪು ಅಂತ ಸಾಬೀತು ಮಾಡಿದರೆ, ನಾನು ಈ ರೀತಿಯ ಚಿತ್ರಗಳನ್ನೇ ಮಾಡುವುದಿಲ್ಲ’ ಎಂದು ಮತ್ತೆ ಬರೆದಿದ್ದಾರೆ. ಅನುರಾಗ್ ಹೇಳಿದ ಮಾತು, ಇದೀಗ ವೈಯಕ್ತಿಕವಾಗಿ ತಿರುಗಿಕೊಂಡು ದಿನಕ್ಕೊಂದು ತಿರುವುದು ಪಡೆದುಕೊಳ್ಳುತ್ತಿದೆ.