‘ಕಾಂತಾರ’ ಚಾಪ್ಟರ್ 1 (Kantara) ಸಿನಿಮಾದ ಮುಹೂರ್ತ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೊಂಬಾಳೆ ಮುಕುಟಕ್ಕೆ ಮತ್ತೊಂದು ಗರಿ. ದೇಶದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಎಂಬ ಖ್ಯಾತಿ ಪಡೆದಿರುವ ಹೊಂಬಾಳೆ. ದೇಶದ ಚಿತ್ರರಂಗವೇ ಕನ್ನಡ ಚಿತ್ರೋದ್ಯಮದೆಡೆ ತಿರುಗಿ ನೋಡುವಂತೆ ಮಾಡಿದ್ದ ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಕಾಂತಾರ’ ಚಿತ್ರ ಗೋವಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Thank you #IFFI54 for bestowing the ‘Special Jury Award’ to Kantara.
ಎಲ್ಲರಿಗೂ ಧನ್ಯವಾದಗಳು.#Kantara #Kantarachapter1@hombalefilms pic.twitter.com/W925AtOthR
— Rishab Shetty (@shetty_rishab) November 28, 2023
Advertisement
ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಕಾಂತಾರ ಸಿನಿಮಾ ಇದೀಗ ಗೋವಾದಲ್ಲಿ ನಡೆಯುತ್ತಿರುವ 54ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿಯನ್ನು(Silver Peacock Award) ಪಡೆದುಕೊಂಡಿದೆ. ಈ ಮೂಲಕ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಈ ಪ್ರಶಸ್ತಿ ಪಡೆದ ಮೊದಲ ಚಿತ್ರ ಎಂಬ ದಾಖಲೆಯನ್ನು ಕಾಂತಾರ ನಿರ್ಮಿಸಿದೆ.
Advertisement
View this post on Instagram
Advertisement
70ರ ದಶಕದಲ್ಲಿ ಪ್ರಪ್ರಥಮ ಬಾರಿಗೆ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಅಭಿನಯಕ್ಕೆ ನಟ ಶಂಕರ್‌ನಾಗ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು. ಆದರೆ ಸಿನಿಮಾ ವಿಭಾಗದಲ್ಲಿ ಕನ್ನಡ ಸಿನಿಮಾಕ್ಕೆ ಈ ಪ್ರಶಸ್ತಿ ಲಭಿಸುತ್ತಿರುವುದು ಇದೇ ಮೊದಲು. ಇದನ್ನೂ ಓದಿ:ಮಹೇಶ್ ಬಾಬುಗೆ ಸಂದೀಪ್ ರೆಡ್ಡಿ ವಂಗಾ ಡೈರೆಕ್ಷನ್
Advertisement
ಸದ್ಯ ‘ಕಾಂತಾರ’ ಚಾಪ್ಟರ್ 1 ಫಸ್ಟ್ ಲುಕ್ ಬಿಡಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ.