`ಕಾಂತಾರ’ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ಅವರು ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕನ್ನಡದ ಡಿಂಡಿಮ ಬಾರಿಸದ ಮೇಲೆ ರಿಷಬ್ ಮೇಲಿನ ಗೌರವ ಅಭಿಮಾನಿಗಳಿಗೆ ದುಪ್ಪಟ್ಟಾಗಿದೆ. ಹೀಗಿರುವಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನ ರಿಷಬ್ ಶೆಟ್ಟಿ ಉದ್ಘಾಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ
2018ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ `ಸರ್ಕಾರಿ ಹಿ.ಪ್ರಾ ಶಾಲೆ ಕಾಸರಗೋಡು’ ಚಿತ್ರ ಪ್ರೇಕ್ಷಕರಿಗೆ ಉತ್ತಮ ಸಂದೇಶ ನೀಡಿತ್ತು. ಶಿಕ್ಷಣ ಮತ್ತು ಶಾಲೆಯ ಕುರಿತಾದ ಉತ್ತಮ ಕಥೆಯನ್ನ ತೆರೆಯ ಮೇಲೆ ರಿಷಬ್ ಬಿಚ್ಚಿಟ್ಟಿದ್ದರು. ಈಗ ತೆರೆಯ ಹಿಂದೆ ಒಂದೊಳ್ಳೆ ಕೆಲಸದ ಮೂಲಕ ರಿಷಬ್ ಅಭಿಮಾನಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ.
ಮಲ್ಲೇಶ್ವರಂ ಕ್ಷೇತ್ರ ಸುಬ್ರಮಣ್ಯನಗರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನ ರಿಷಬ್ ಉದ್ಘಾಟನೆ ಮಾಡಿದ್ದಾರೆ. ಮಲ್ಲೇಶ್ವರಂನ 24ನೇ ಮಾದರಿ ಶಾಲೆ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ, ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಉಪಸ್ಥಿತರಿದ್ದರು.
ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ರಿಷಬ್ ಮಾತನಾಡಿದ್ದಾರೆ. ನಮ್ಮ ಹಳ್ಳಿಗಳಲ್ಲೂ ಈ ತರಹದ ಶಾಲೆಗಳು ಸಿಗಬೇಕು ಎಂದು ಖುಷಿಯಿಂದ ನಟ ಪ್ರತಿಕ್ರಿಯಿಸಿದ್ದಾರೆ.