ಮನುಷ್ಯನ ಗುಣವೇ ಅದಲ್ವೇ..? ಕೆಲವೊಂದು ವಸ್ತುಗಳ ಜೊತೆ ಭಾವನಾತ್ಮಕ ನಂಟು ಬೆಸೆದುಕೊಂಡುಬಿಡುತ್ತಾರೆ. ಅದನ್ನ ಅಷ್ಟು ಸುಲಭವಾಗಿ ನಶಿಸಿಹೋಗಲು ಬಿಡೋದಿಲ್ಲ, ಈಗ ಆಗಿರೋದೇ ಇದೇ…ಉಡುಪಿಯಲ್ಲೊಂದು (Udupi) ಐತಿಹಾಸಿಕ ಜೈಲು (Jali) ಕಟ್ಟಡವನ್ನ ಕೆಡವಲು ತಯಾರಿ ನಡೆಯುತ್ತಿದೆ. ಆದರೆ ಈ ಜೈಲನ್ನ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಇದೇ ಜೈಲಲ್ಲಿ ಹಲವು ಸಿನಿಮಾಗಳು ಶೂಟಿಂಗ್ ಆಗಿವೆ. ದಂತಕತೆ ಕಾಂತಾರದ ಚಿತ್ರೀಕರಣವೂ ಇಲ್ಲೇ ನಡೆದಿದೆ. ಉಡುಪಿಯಲ್ಲಿ ಹಲವು ನೆನಪುಗಳಿಗೆ ಸಾಕ್ಷಿಯಾದ ಈ ಭವ್ಯ ಕಟ್ಟಡ ಉಳಿಸಿ ದೊಡ್ಡ ಹೋರಾಟವೇ ನಡೆಯುತ್ತಿದೆ. ರಿಷಬ್ ಶೆಟ್ಟಿ ಕೂಡ ಕೈಜೋಡಿಸಿದ್ದಾರೆ.
Advertisement
ಉಡುಪಿ ಪ್ರಕೃತಿ ಸೊಬಗಿನ ನೆಲವೀಡು ಶ್ರೀಕೃಷ್ಣನ ಸನ್ನಿಧಿ, ಕಲೆ..ಸಂಸ್ಕೃತಿ…ವಿವಿಧ ಆಚರಣೆಗಳ ತವರೂರು, ಈ ಜಾಗದ ಹೃದಯ ಭಾಗದಲ್ಲೇ ಇದೆ ಒಂದು ಬೃಹತ್ ಕಟ್ಟಡ. ಪಟ್ಟಣದ ಮಧ್ಯೆಯೇ ಇದ್ದರೂ ಈ ಜಾಗಕ್ಕೆ ರಾತ್ರಿ ಇರಲಿ ಹಗಲು ಹೊತ್ತಲ್ಲಿ ಹೋಗೋದಕ್ಕೂ ಜನ ಹೆದರುತ್ತಾರೆ. ಕಾರಣ ಶಿಥಿಲಗೊಂಡಿದೆ. ನೋಡಿಕೊಳ್ಳುವವರಿಲ್ಲದೆ ಭಯಭೀತಿ ಹುಟ್ಟಿಸುವ ಜಾಗವಾಗಿದೆ. ದುರಂತ ಅಂದ್ರೆ ಅಲ್ಲಿನ ಅನೇಕರಿಗೆ ಆ ಕಟ್ಟಡದ ಮಹತ್ವವೂ ತಿಳಿದಿಲ್ಲ. ಇದನ್ನೂ ಓದಿ:ಚುನಾವಣೆ ಕಣದಲ್ಲಿ ದಳಪತಿ ವಿಜಯ್ ಪಕ್ಕಾ : ನಿರಂತರ ಮೀಟಿಂಗ್ ನಲ್ಲಿ ನಟ
Advertisement
Advertisement
ಈ ಕಟ್ಟಡ ಅದೆಷ್ಟು ಗಟ್ಟಿ ಅಂದರೆ 112 ವರ್ಷದ ಹಿಂದಿನದ್ದಾದರೂ ಗೋಡೆ ಬಿದ್ದಿಲ್ಲ…ಕಾರಣ ಅದೆಷ್ಟು ಸ್ವಾತಂತ್ರ್ಯದ ಸೇನಾನಿಗಳ…ಅದೆಷ್ಟೋ ಬ್ರಿಟೀಷರ ವಿರುದ್ಧ ಹೋರಾಡುವ ಕೆಚ್ಚೆದೆಯ ಬಂಟರ ಬಿಸಿ ಉಸಿರಿನ ಬಿಸಿಗೆ ಗಟ್ಟಿಕೊಂಡಿದೆ. ಭಾರತಾಂಬೆಯ ಸೇವೆ ಮಾಡಿದ್ದಕ್ಕೆ ಬ್ರೀಟೀಷರು ಕೊಟ್ಟ ಲಾಠಿ ಏಟಿನಿಂದ ಬಂದ ಶಬ್ಧಕ್ಕೆ ಈ ಗೋಡೆಗಳು ಸಾಕ್ಷಿಯಾಗಿದೆ. ಹಲವು ವರ್ಷ ನಮ್ಮನ್ನಾಳಿದ ಬ್ರೀಟೀಷರ ಆಟಾಟೋಪವನ್ನ ಸಹಿಸಿಕೊಂಡಿದೆ. ಭಾರತ ಮಾತೆಯ ಸೇವೆ ಮಾಡಿದ ಸ್ವಾತಂತ್ರ್ಯ ಯೋಧರ ಧ್ಯೇಯನಿಷ್ಟೆಗೆ ಸಾಕ್ಷಿಯಾಗಿದೆ. ಇದುವೇ ಉಡುಪಿಯಲ್ಲಿರುವ ಇತಿಹಾಸ ಪ್ರಸಿದ್ಧ ಸೆರೆಮನೆ.
Advertisement
ಉಡುಪಿಯಲ್ಲಿ ಸದ್ಯಕ್ಕೆ ಇದರ ಮಹತ್ವ ಅರಿಯದವರ ಪಾಲಿನ ಭೂತಬಂಗಲೆ ಎಂದು ಕರೆಸಿಕೊಳ್ಳುವ ಈ ಜೈಲು ಕೆಡವಿ ನಗರಸಭೆ ನಿರ್ಮಾಣ ಮಾಡಲು ತಯಾರಿ ನಡೆಯುತ್ತಿದೆ. ಇದುವೇ ಈಗ ದೊಡ್ಡ ಅಭಿಯಾನವೊಂದಕ್ಕೆ ಸಾಕ್ಷಿಯಾಗಿರುವ ಕಟ್ಟಡ. ಕಾರಣ ಈ ಕಟ್ಟಡ ಅನೇಕರಿಗೆ ಭಾವನಾತ್ಮಕ ತಾಣ. ಜನಸಂಪರ್ಕ ಇಲ್ಲದಿದ್ದರೂ ಸರ್ಕಾರ ಈ ಕಟ್ಟಡವನ್ನ ಚಿತ್ರೀಕರಣಕ್ಕೆ ಕೊಟ್ಟಿತ್ತು. ಅದೇ ಭಾಗದವರೇ ಆಗಿರುವ ನಟ ರಿಷಬ್ ಶೆಟ್ಟಿಗೆ ಯಾವುದೇ ಸೆಟ್ ಹಾಕಿದರೂ ಸಿಗದಂಥಹ ಕಲ್ಪನೆಗೆ ತಕ್ಕಂತ ಕಟ್ಟಡ ಕಣ್ಣಿಗೆ ಬಿದ್ದಾಗ ಅವರದ್ದೇ ಬೆಲ್‌ಬಾಟಂ…ಹಾಗೂ ವಿಶ್ವಪ್ರಸಿದ್ಧ ಕಾಂತಾರ (Kantara) ಚಿತ್ರೀಕರಣವನ್ನೂ ಮಾಡಿದ್ದಾರೆ.
ಕಾಂತಾರ ಇಡೀ ವಿಶ್ವಕ್ಕೆ ಕನ್ನಡಿಗರ ಶಕ್ತಿ ಪ್ರದರ್ಶಿಸಿದ ಸಿನಿಮಾ. ಕರಾವಳಿ ಸಂಸ್ಕೃತಿ ಆಚರಣೆ ನಂಬಿಕೆ ಭಾಷೆಯನ್ನ ಜಗತ್ತಿಗೆ ಪಸರಿಸಿದ ಸಿನಿಮಾ. ಕಾಂತಾರ ಒಂದು ಹೆಮ್ಮೆ…ಕಾಂತಾರ ಬರೀ ಚಿತ್ರವನ್ನ ಕನ್ನಡಿಗರಿಗೆ ಸ್ವಾಭಿಮಾನ. ಹೀಗಿರುವಾಗ ಅದರಲ್ಲಿ ಅಡಕವಾಗುವ ಪ್ರತಿಯೊಂದು ವಸ್ತುವಿಗೂ ಭಾವನಾತ್ಮಕ ಸಂಬಂಧ ಪ್ರತಿಯೊಬ್ಬರಿಗೂ ಇರುತ್ತೆ. ಮುಖ್ಯವಾಗಿ ಅಲ್ಲಿನ ಜನರಿಗೆ. ಆದರೀಗ ಈ ಕಟ್ಟಡ ದಂತಕತೆಯಾಗಿ ಉಳಿಯುತ್ತದಾ..? ಕಾಂತಾರ ಸಿನಿಮಾವಷ್ಟೇ ಅಲ್ಲದೆ ಮುಂಬರುವ ಟೋಬಿ ಚಿತ್ರೀಕರಣವೂ ಇಲ್ಲಿಯೇ ನಡೆದಿದೆ. ಬ್ರಿಟಿಷರ ಕಾಲದಲ್ಲಿ ಹೋರಾಟಗಾರರನ್ನ ಬಂಧಿಸಿದ ಜೈಲಿದು. ಉಡುಪಿಯಲ್ಲಿರುವ ಮದ್ರಾಸ್ ರೂಫಿಂಗ್‌ನ ಏಕೈಕ ಬಿಲ್ಡಿಂಗ್. ಸುಣ್ಣ-ಬೆಲ್ಲದ ಗಾರೆಯಿಂದ ನಿರ್ಮಾಣ ಆಗಿರುವ ಅಪರೂಪದ ಕಟ್ಟಡ. ಇಲ್ಲಿ ಪುರಾತನ ವಾಸ್ತುಶಿಲ್ಪ ನೋಡಬಹುದಾಗಿದೆ. ಎರಡು ಅಂತಸ್ಥಿನ ಕಟ್ಟಡದಲ್ಲಿ 24 ಸೆಲ್‌ಗಳಿವೆ. ಕಟ್ಟಡ ಕೆಡವದಂತೆ ಸಿನಿಮಾಮಂದಿ ಮತ್ತು ಇತಿಹಾಸ ಆಸಕ್ತರ ಕೋರಿದ್ದಾರೆ. ಈ ಬಗ್ಗೆ ಅಭಿಯಾನವೂ ನಡೆಯುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ ಈ ಕಟ್ಟಡವನ್ನ ಉಳಿಸಿಕೊಂಡು ಮ್ಯೂಸಿಯಮ್ ಮಾಡಬಹುದು ಎನ್ನುವುದು ಒತ್ತಾಯ.
‘ಕಾಂತಾರ’ ಎನ್ನುವ ದಂತಕತೆಯಲ್ಲಿ ಮೂಡಿಬರುವ ಜೈಲಿನ (Jail) ದೃಶ್ಯ ಪ್ರಮುಖ ದೃಶ್ಯದಲ್ಲೊಂದು. ಇಲ್ಲಿಯೇ ಕಾಡುಶಿವನಿಗೆ ದೈವ ಕನಸಲ್ಲಿ ಬಂದು ಸುಳಿವು ಕೊಡುತ್ತೆ. ರಿಷಬ್ ದೈವಕೋಲದ ಪ್ರತಿ ದೃಶ್ಯವನ್ನ ಚಿತ್ರೀಕರಣ ಮಾಡುವ ವೇಳೆ ಶ್ರದ್ಧೆ ಭಕ್ತಿ ನಿಯಮ ಪಾಲಿಸಿದ್ದಾರೆ. ಪಾಳು ಬಿದ್ದಿದೆ ಎನ್ನಲಾದ ಕಟ್ಟಡವನ್ನ ಜೀವಂತಗೊಳಿಸಿದ್ದಾರೆ. ಮುಂದೆ ಎಷ್ಟೋ ಸಿನಿಮಾಗಳು ಇದೇ ಜಾಗದಲ್ಲಿ ಚಿತ್ರೀಕರಣ ಕನಸು ಕಂಡಿವೆ. ಇತಿಹಾಸಗಳು ಭವಿಷ್ಯದ ಬೆರಗು. ಹೀಗಾಗಿ ಇಂಥಹ ಬೆರಗುಗಳನ್ನ ಕಾಪಾಡಿಕೊಳ್ಳಬೇಕು ಎಂಬ ಹೋರಾಟ ಜೋರಾಗಿದೆ.
ಕಾಂತಾರ ಚಿತ್ರೀಕರಣಕ್ಕೆ ಇದೇ ಜೈಲು ಬಳಿಸಿಕೊಂಡಿದ್ಯಾಕೆ ಅನ್ನೋದಾದ್ರೆ ಅಪರೂಪದ ವಾಸ್ತುಶಿಲ್ಪವಿದೆ. ಸೆಲ್‌ಗಳಲ್ಲಿ ಆ ಕಬ್ಬಿಣದ ಕಂಬಿಗಳು, ಎತ್ತರದ ಗೋಡೆ ಮೇಲ್ಛಾವಣಿಗೆ ಹಾಕಲಾದ ಹಂಚು ಎಲ್ಲವೂ ನೈಜತೆಯಿಂದ ಕೂಡಿದೆ. ಅಂದಹಾಗೆ ರಿಷಬ್ ಯೋಚಿಸಿದ್ದರೆ ಸೆಟ್ ಹಾಕಬಹುದಿತ್ತು ಕಲ್ಪನೆಯನ್ನೂ ಮೀರಿದ ಸೌಂದರ್ಯ ಹಾಗೂ ಸೊಗಡು 112 ವರ್ಷದ ಇತಿಹಾಸದ ಈ ಜೈಲಿನಲ್ಲಿದೆ. ಅಲ್ಲಿನ ಭಾಗದ ಜನರು ದೈವದ ಮೇಲೆ ನಂಬಿಕೆ ಉಳ್ಳವರು. ಹೀಗಾಗೇ ಪಾಳುಬಿದ್ದ ಜೈಲಿನಲ್ಲಿ ದೈವಪ್ರೇರಣೆ ಎಂಬಂತೆ ಚಿತ್ರೀಕರಣ ನಡೆದಿದೆ. ಸರ್ಕಾರ ಮನಸ್ಸು ಮಾಡಿದರೆ ಇತಿಹಾಸವನ್ನ ಉಳಿಸಿಕೊಳ್ಳೋದು ದೊಡ್ಡದಲ್ಲ. ಭವಿಷ್ಯದಲ್ಲಿ ಇದೊಂದು ಮ್ಯೂಸಿಯಂ ಆಗ ಬದಲಾಗಿ ದೊಡ್ಡಪ್ರವಾಸಿತಾಣವೇ ಆಗಬಹುದು. ಮಾಡುವ ಉತ್ಸಾಹ ಇರಬೇಕಷ್ಟೇ.