Bengaluru CityCinemaKarnatakaLatestMain PostSandalwoodTV Shows

ಆಚಾರ, ನಂಬಿಕೆ, ತಲೆಮಾರು, ಧರ್ಮ ಇವುಗಳ ಬಗ್ಗೆ ಮಾತಾಡೋ ಅರ್ಹತೆ ನನಗಿಲ್ಲ ಅನಿಸತ್ತೆ: ರಿಷಬ್‌ ಶೆಟ್ಟಿ

ದೇಶದ ದಶದಿಕ್ಕುಗಳಲ್ಲೂ ಸೌಂಡ್ ಮಾಡುತ್ತಿರುವ `ಕಾಂತಾರ’ (Kantara Film) ಸಿನಿಮಾಗೆ ಇತ್ತೀಚೆಗೆ ನಟ ಚೇತನ್(Chetan) ಭೂತಾಕೋಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ರಿಷಬ್ ಕೂಡ ನೋ ಕಾಮೆಂಟ್ಸ್ ಅಂತಾ ಉತ್ತರಿಸಿದ್ದರು. ಮತ್ತೆ ರಿಷಬ್‌ಗೆ ಚೇತನ್ ಟಾಂಗ್ ಕೊಟ್ಟಿದ್ದರು. ಈ ವಿಷ್ಯವಾಗಿ ರಿಷಬ್ ಶೆಟ್ಟಿ ರಿಯಾಕ್ಷನ್ ಕೊಟ್ಟಿದ್ದಾರೆ.

ದೈವ ಕೋಲದ ಕಥೆಗೆ ಇಡೀ ಚಿತ್ರರಂಗವೇ ತಲೆಬಾಗಿದೆ. ಸಿನಿಮಾ ನೋಡಿ ಎಲ್ಲರೂ ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹೀಗಿರುವಾಗ ಭೂತಕೋಲ ಹೀಂದೂ ಸಂಸ್ಕೃತಿಯಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ತುಳುನಾಡಿನ ದೈವ ನಂಬುವವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ರಿಷಬ್(Rishab Shetty) ಅವರನ್ನ ಚೇತನ್ ಕೆಣಕಿದ್ದಾರೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

`ಕಾಂತಾರ'(Kantara Film) ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಇದೀಗ ಚೇತನ್ ಹೇಳಿಕೆ ನಟ ಪ್ರತಿಯುತ್ತರ ನೀಡಿದ್ದಾರೆ. ಚೇತನ್ ಹೇಳಿಕೆಗೆ ಬಗ್ಗೆ ನಾನು ಏನು ಹೇಳಲ್ಲ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಚೇತನ್ ಮಾತಿಗೆ ಯಾವುದೇ ರಿಯಾಕ್ಷನ್ ಕೊಡುವುದಿಲ್ಲ ಎಂದು ಮಾತನಾಡಿದ್ದಾರೆ.

ಈ ಬಗ್ಗೆ ನಾನೇನೂ ಕಾಮೆಂಟ್‌ ಮಾಡಲ್ಲ. ಅವರವರ ಅಭಿಪ್ರಾಯವನ್ನು ತಿಳಿಸುತ್ತಾರೆ. ಈ ಆಚರಣೆ , ನಂಬಿಕೆ ತಲೆಮಾರು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದರ ಬಗ್ಗೆ ಮಾತಾಡೋಕೆ ನನಗೆ ಅರ್ಹತೆ ಇಲ್ಲ. ದೈವ ನರ್ತಕರು ಹಾಗೂ ಅದನ್ನು ಪಾಲಿಸಿಕೊಂಡು ಹೋಗುವವರಿಗೆ ಮಾತ್ರ ಈ ಬಗ್ಗೆ ಮಾತನಾಡುವುದಕ್ಕೆ ಅರ್ಹತೆ ಇರುವುದು. ಅವರುಗಳು ಈಗಾಗಲೇ ಮಾತಾಡಿದ್ದಾರೆ. . ಹೀಗಾಗಿ ಈ ಬಗ್ಗೆ ನಾನು ಹೆಚ್ಚೇನು ಕಾಮೆಂಟ್‌ ಮಾಡಲ್ಲ ಎಂದು ರಿಷಬ್‌ ತಿಳಿಸಿದರು.

Live Tv

Leave a Reply

Your email address will not be published. Required fields are marked *

Back to top button