ಉಡುಪಿ: ಕಂಬಳ (Kambala) ಮತ್ತು ದೈವಾರಾಧನೆ (Daivaradhane) ಕಾಂತಾರ ಮೂವಿಯ ಸಕ್ಸಸ್‍ನ ಹಿಂದಿರುವ ಶಕ್ತಿಗಳು. ಚಿತ್ರ ಇಷ್ಟು ಸಕ್ಸೆಸ್ ಆಗ್ತದೆ ಅಂತ ಯಾರೂ ಉಹಿಸಿರಲಿಲ್ಲ. ಈ ಮಧ್ಯೆ ಶೂಟಿಂಗ್ ಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಂಬಳದ ಕೋಣವನ್ನು ಕೊಡಲು ಮಾಲೀಕರು ಹಿಂದೇಟು ಹಾಕಿದ್ದರು ಎಂಬ ವಿಚಾರವೊಂದು ಬಯಲಾಗಿದೆ.
Advertisement
ಇದು ಸಂಸ್ಕೃತಿಯ ನಡುವಿನ ಸಂಘರ್ಷ, ಅರಣ್ಯ ಉಳಿವಿಗಾಗಿನ ಹೋರಾಟ, ಇದೊಂದು ಬದುಕಿನ ಹಕ್ಕಿನ ಜಟಾಪಟಿ ಎಂಬ ಬೇರೆ ಬೇರೆ ಆಯಾಮಗಳಲ್ಲಿ ಚಿತ್ರ ತೆರೆದುಕೊಂಡು ಯಶಸ್ವಿಯಾಗಿದೆ. ನಾಯಕ ನಟ ರಿಷಬ್ ಶೆಟ್ಟಿ (Director, Actor Rishab Shetty) ಕಂಬಳದ ಓಟಗಾರನಾಗಿ ಎಂಟ್ರಿ ಕೊಡುವ ಮೂಲಕ ಚಿತ್ರಕ್ಕೆ ನಾಯಕ ನಟ ಶಿವನ ಪ್ರವೇಶವಾಗುತ್ತದೆ. ಕಂಬಳದ ಕೋಣಗಳು ಇಲ್ಲಿ ಪ್ರಮುಖ ಹೈಲೈಟ್ಸ್.
Advertisement
Advertisement
ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಓಡುವ ಕೋಣಗಳಿಗೆ ಜೋಡಿಗೆ ಮೂರು ಲಕ್ಷದಿಂದ 5 ಲಕ್ಷದವರೆಗೂ ಬೆಲೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಂಬಳದ ಕೋಣಗಳನ್ನು ಸಾಕುತ್ತಾರೆ. ಮನೆಗಿಂತ ಹಟ್ಟಿಯನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುತ್ತದೆ. ಕಾಂತಾರ ಚಿತ್ರ ಶೂಟಿಂಗ್ ಗೆ ಕಂಬಳದ ಕೋಣಗಳು ಬೇಕು ಎಂದಾದಾಗ ಬೈಂದೂರು ತಾಲೂಕು ಬೋಳಂಬಳ್ಳಿಯ ಪರಮೇಶ್ವರ ಭಟ್ (Parameshwara Bhat) ತನ್ನ ಕೋಣಗಳನ್ನು ಕೊಡಲು ಹಿಂದೆ ಮುಂದೆ ನೋಡಿದ್ದರು. ಇದನ್ನೂ ಓದಿ: ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು
Advertisement
ಕಾಂತಾರ (Kantara) ಚಿತ್ರದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿಯ ತಲ್ಲೀನತೆ ಮತ್ತು ಪಟ್ಟ ಶ್ರಮ ಕಾಣಿಸುತ್ತದೆ. ಕಂಬಳದ ಓಟ ಭಾರೀ ಗಾತ್ರದ ಕೋಣಗಳ ಬಳಕೆಯನ್ನು ಡ್ಯೂಪ್ ಮೂಲಕ, ಎಡಿಟಿಂಗ್ ಮೂಲಕ ತೋರಿಸಬಹುದಿತ್ತು. ಆದರೆ ರಿಷಬ್ ಶೆಟ್ಟಿ ಸಂಪೂರ್ಣವಾಗಿ ತನ್ನನ್ನು ತಾನು ಚಿತ್ರಕ್ಕೆ ಅರ್ಪಣೆ ಮಾಡಿದ್ದರು. ಒಂದು ತಿಂಗಳುಗಳ ಕಾಲ ಕೋಣ ಪಳಗಿಸುವ ತರಬೇತಿ ಪಡೆದುಕೊಂಡಿದ್ದರು. ಕೋಣದ ಪ್ರೀತಿಯನ್ನು ಗಳಿಸಿ, ಕೆಸರುಗದ್ದೆಯಲ್ಲಿ ಹೇಗೆ ವರ್ತಿಸಬೇಕು ಎಂದು ಮನದಟ್ಟು ಮಾಡಿ ಚಿತ್ರ ಶೂಟಿಂಗ್‍ಗೆ ಇಳಿದಿದ್ದರು.
ಪರಮೇಶ್ವರ್ ಭಟ್ಟರ ಕೋಣಗಳು ಈಗ ವರ್ಲ್ಡ್ ಫೇಮಸ್ ಆಗಿವೆ. ಪ್ರಪಂಚ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳು ಮಹಾಪೂರ ಈ ಕುಟುಂಬಕ್ಕೆ ಹರಿದು ಬರುತ್ತಿದೆ. ರಿಷಬ್ ಶೆಟ್ಟಿಗೆ ಕೋಣ ಓಡಿಸುವುದನ್ನು ಹೇಳಿಕೊಟ್ಟ ಮಹೇಶ್ ಪೂಜಾರಿ ಕುಂದಾಪುರ ಬೈಂದೂರಿನಲ್ಲಿ ಈಗ ಹೀರೋ ಆಗಿದ್ದಾರೆ. ಆರಂಭದ ಮಾತುಕತೆ, ಶೂಟಿಂಗ್ ನೆನಪಿಸಿಕೊಳ್ಳೋ ಇವರು ಕಾಂತಾರ ಈ ಮಟ್ಟಿಗೆ ಅದ್ಭುತ ಚಿತ್ರ ಆಗಲಿದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಇದನ್ನೂ ಓದಿ: ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ