ಕನ್ನಡದ ಕಾಂತಾರ ಚೆಲುವೆ ಸಪ್ತಮಿ ಗೌಡ (Saptami Gowda) ಇದೀಗ ಟಾಲಿವುಡ್ (Tollywood) ರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ(Sreeleela) ಪೈಪೋಟಿ ನಡುವೆ ಕಾಂತಾರ (Kantara) ನಟಿ ಎಂಟ್ರಿ ಕೊಟ್ಟಿದ್ದು, ಇಬ್ಬರಿಗೂ ಠಕ್ಕರ್ ಕೊಡಲು ಕನ್ನಡದ ಮತ್ತೋರ್ವ ನಟಿಮಣಿ ಸಜ್ಜಾಗಿದ್ದಾರೆ.
Advertisement
‘ಕಾಂತಾರ’ ಸಿನಿಮಾದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ನಾಯಕಿಯಾಗಿ ಮಿಂಚ್ತಿರುವ ಬೆಂಗಳೂರಿನ ಬೆಡಗಿ ಸಪ್ತಮಿ, ಈಗ ತೆಲುಗು ಸಿನಿಮಾಗೆ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಭೀಷ್ಮ ಹೀರೋ ನಿತಿನ್ ನಟನೆಯ ‘ತಮ್ಮುಡು’ ಸಿನಿಮಾಗೆ ಸಪ್ತಮಿ ಗೌಡ ಹೀರೋಯಿನ್ ಆಗಿದ್ದಾರೆ. ಈ ಮೂಲಕ ತೆಲುಗು ಅಂಗಳಕ್ಕೆ ಮತ್ತೋರ್ವ ನಟಿ ಲಗ್ಗೆ ಇಡ್ತಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ
Advertisement
ಹೌದು.. ನಿತಿನ್ (Nithin) ನಾಯಕಿಯಾಗಿ ಸಪ್ತಮಿ ಗೌಡ (Saptami Gowda) ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ ತಮ್ಮುಡು ಸಿನಿಮಾ ಮೂಡಿ ಬರುತ್ತಿದ್ದು, ದಿಲ್ ರಾಜು (Dilraju) ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ಹಿಂದೆ ತಮ್ಮುಡು ಚಿತ್ರದ ಟೈಟಲ್ನಲ್ಲಿ ಪವನ್ ಕಲ್ಯಾಣ್ ನಟಿಸಿ ಗಮನ ಸೆಳೆದಿದ್ದರು. ಈಗ ಅದೇ ಟೈಟಲ್ನಲ್ಲಿ ಭಿನ್ನವಾಗಿರೋ ಕಥೆ ಮಾಡಲು ಚಿತ್ರತಂಡ ಹೊರಟಿದೆ.
Advertisement
Advertisement
ಈ ಹಿಂದೆ ನಿತಿನ್ ಚಿತ್ರದಿಂದ ರಶ್ಮಿಕಾ ಹೊರ ಬಂದಿದ್ದರು. ಬಳಿಕ ಆ ಸಿನಿಮಾ ಶ್ರೀಲೀಲಾ ಪಾಲಾಗಿತ್ತು. ಈಗ ನಿತಿನ್ ಮುಂದಿನ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಕಾಂತಾರ ಸಿನಿಮಾ ಕೂಡ ತೆಲುಗಿನಲ್ಲಿ ಡಬ್ ಆಗಿ ಸಕ್ಸಸ್ ಕಂಡಿತ್ತು. ಈಗಾಗಲೇ ತೆಲುಗು ಸಿನಿರಸಿಕರಿಗೆ ನಟಿ ಪರಿಚಿತರಾಗಿದ್ದಾರೆ. ಹಾಗಾಗಿ ರಶ್ಮಿಕಾ, ಶ್ರೀಲೀಲಾ, ನಭಾ, ನೇಹಾ ಶೆಟ್ಟಿ(Neha Shetty) ಮೀರಿ ಸಪ್ತಮಿ ಬೆಳೆಯುವ ಸೂಚನೆ ಸಿಕ್ತಿದೆ ಅಂತಿದ್ದಾರೆ ಸಿನಿಪಂಡಿತರು.