ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಭರ್ಜರಿ 50 ದಿನಗಳನ್ನ ಪೂರೈಸಿದೆ. ಈ ಖುಷಿ ಸಂಭ್ರಮವನ್ನ ನಟ ರಿಷಬ್ ಶೆಟ್ಟಿ (Rishab Shetty) ಹಾಗೂ ಹೊಂಬಾಳೆ ಫಿಲಂಸ್ (Hombale Films) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಈ ಸಿನಿಮಾ ಇಂಗ್ಲೀಷ್ ಭಾಷೆಗೂ ಡಬ್ಬಿಂಗ್ ಆಗಿ ತೆರೆಕಂಡಿದೆ.
ಕಾಂತಾರ ಚಾಪ್ಟರ್-1 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಂದೊಂದೇ ದಾಖಲೆಗಳನ್ನ ಪುಡಿಗಟ್ಟಿ ಇಲ್ಲಿಯವರೆಗೂ ಸುಮಾರು 900 ಕೋಟಿಯನ್ನ ಗಳಿಕೆ ಮಾಡಿದೆ. ಕಾಂತಾರ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಭರ್ಜರಿ ಮೊತ್ತವನ್ನೇ ಕಲೆ ಹಾಕಿದೆ.ಇದನ್ನೂ ಓದಿ: ನಮ್ಮ ಸಂಸೃತಿಯನ್ನ ಪ್ರಪಂಚಕ್ಕೆ ಪರಿಚಯಿಸಿರುವ ರಿಷಬ್ ಶೆಟ್ಟಿ ಕಾರ್ಯವೈಖರಿ ಶ್ಲಾಘನೀಯ: ಡಿಕೆಶಿ
Celebrating 50 glorious days of #KantaraChapter1.
A divine cinematic experience rooted in our timeless heritage and sacred traditions.#50DaysOfKantaraChapter1 ❤️🔥https://t.co/d7It7XIZUO#BlockbusterKantara #KantaraInCinemasNow #DivineBlockbusterKantara #KantaraEverywhere… pic.twitter.com/iEvur0NiQL
— Rishab Shetty (@shetty_rishab) November 20, 2025
ಹೊಂಬಾಳೆ ಸಂಸ್ಥೆ ನಿರ್ಮಾಣದ ಸಿನಿಮಾ ಇದಾಗಿದ್ದು, ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ರಿಷಬ್ ಶೆಟ್ಟಿ ಸದ್ಯ ಕಾಂತಾರ ಸಕ್ಸಸ್‌ನ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ನಂತರ ಕಾಂತಾರ ಪಾರ್ಟ್-2 ಕೈಗೆತ್ತಿಕೊಳ್ತಾರಾ..? ಅಥವಾ ಜೈ ಹನುಮಾನ್ ಸಿನಿಮಾವನ್ನ ಮೊದಲು ಮಾಡ್ತಾರಾ..? ಕಾದು ನೋಡಬೇಕಿದೆ.



