ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಈಗ ಯಶಸ್ಸಿನ ನಾಗಾಲೋಟದಲ್ಲಿದೆ. ಶೀಘ್ರದಲ್ಲೇ 1,000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.
ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದು. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿ.
The journey of #KantaraChapter1 has been monumental!
We gathered as a team to celebrate, yet this victory truly belongs to you, the audience. ✨
Standing together, deeply grateful for this historic run.
We poured… pic.twitter.com/xNYLZcUpaQ
— Rishab Shetty (@shetty_rishab) November 8, 2025
ಕಾಂತಾರ ಚಾಪ್ಟರ್-1 ಚಿತ್ರ ಬಿಡುಡಗೆಯಾಗಿ 4 ವಾರಗಳು ಕಳೆದಿದ್ದು, 5ನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹೊತ್ತಲ್ಲೇ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿ ಸಂಭ್ರಮಿಸಿದೆ. ಇದನ್ನೂ ಓದಿ: `Iʼll Marry Vijay’ – ಮದುವೆ ವದಂತಿಗೆ ರಶ್ಮಿಕಾ ಫುಲ್‌ಸ್ಟಾಪ್ – ಫಸ್ಟ್ ರಿಯಾಕ್ಷನ್ ಏನು?
ಕಾಂತಾರ ಚಾಪ್ಟರ್-1 ನಿರ್ಮಾಣಕ್ಕೆ ಕಾರಣಿಭೂತರಾಗಿರುವ ಪ್ರತಿಯೊಬ್ಬರನ್ನೂ ಚಿತ್ರತಂಡ ಆಹ್ವಾನಿಸಿ ಪಾರ್ಟಿ ಕೊಟ್ಟಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಕ್ಸಸ್ ಪಾರ್ಟಿಯಲ್ಲಿ ನಟ ರಿಷಬ್ ಶೆಟ್ಟಿ (Rishab Shetty), ಪತ್ನಿ ಪ್ರಗತಿ ಶೆಟ್ಟಿ (Pragathi Shetty), ನಟಿ ರುಕ್ಮಿಣಿ ವಸಂತ್ (Rukmini Vasanth), ಕ್ಯಾಮೆರಾಮ್ಯಾನ್ ಅರವಿಂದ್ ಕೌಶಿಕ್, ಗುಲ್ಷನ್ ದೇವಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಚಿತ್ರತಂಡ ಜೊತೆಯಾಗಿ ಗೆದ್ದ ಖುಷಿಯನ್ನ ಸೆಲೆಬ್ರೇಟ್ ಮಾಡಿದೆ.
ಕಾಂತಾರ ಎಂದು ಬರೆದಿರುವ ಕೇಕ್‌ನ್ನ ಕಟ್ ಮಾಡಿ ಪರಸ್ಪರ ತಿನ್ನಿಸಿ ಚಿತ್ರತಂಡ ಖುಷಿ ಪಟ್ಟಿದೆ. ಈ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಹೊಂಬಾಳೆ ಫಿಲ್ಸ್ಮ್ `ಈ ಗೆಲವು ಕೇವಲ ನಮ್ಮದಲ್ಲ..ನಿಮ್ಮೆಲ್ಲರದ್ದು’ ಎಂದಿದೆ. ಇದನ್ನೂ ಓದಿ: ಮೋಹನ್ ಲಾಲ್ ನಟನೆಯ `ವೃಷಭ’ ರಿಲೀಸ್ ಡೇಟ್ ಫಿಕ್ಸ್
ಹೊಂಬಾಳೆ ಸಂದೇಶ ಏನು?
ಕಾಂತಾರ ಚಾಪ್ಟರ್-1 ಪ್ರಯಾಣವು ಸ್ಮರಣೀಯವಾಗಿದೆ. ಈ ಗೆಲುವು ನಿಜವಾಗಿಯೂ ನಿಮಗೆ, ಪ್ರೇಕ್ಷಕರಿಗೆ ಸೇರಿದ್ದು, ನೀವು ನಮ್ಮೊಂದಿಗೆ ಒಟ್ಟಿಗೆ ನಿಂತು, ಈ ಐತಿಹಾಸಿಕ ಓಟಕ್ಕೆ ಸಹಕರಿಸಿದ್ದೀರಿ, ಇದಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನಾವು ಮನಸ್ಫೂರ್ತಿ ಕೆಲಸ ಮಾಡಿದ್ದೇವೆ. ಆದರೆ ನಿಮ್ಮ ಅಗಾಧ ಪ್ರೀತಿಯೇ ಇದನ್ನು ಬ್ಲಾಕ್‌ಬಸ್ಟರ್ ಆಗಿ ಮಾಡಿ ಅದೃಷ್ಟ ಕೊಟ್ಟಿದೆ. ಈ ಚಿತ್ರವನ್ನ ದಂತಕಥೆ ಮಾಡಿದ್ದಕ್ಕಾಗಿ ಹೃದಯಪೂರ್ವಕ ಸಾಷ್ಟಾಂಗ ಧನ್ಯವಾದಗಳು ಎಂದು ಹೇಳಿದೆ ಹೊಂಬಾಳೆ ಫಿಲ್ಸ್ಮ್.



