ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 (Kantara Chapter 1) ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಗುರುವಾರ ಬೆಳಗ್ಗೆ 6:30ರಿಂದಲೇ ಫ್ಯಾನ್ಸ್ ಶೋ ಆರಂಭವಾಗಿವೆ. ಬೆಳ್ಳಿ ತೆರೆ ಮೇಲೆ ಕಾಂತಾರ ಅಬ್ಬರವನ್ನ ಕಣ್ತುಂಬಿಕೊಂಡ ಪ್ರೇಕ್ಷಕ ಮಹಾಪ್ರಭುಗಳು ಅದ್ಭುತ ರೆಸ್ಪಾನ್ಸ್ ನೀಡಿದ್ದಾರೆ.
ಕಾಂತಾರ.. ಕಾಂತಾರ.. ಎಲ್ಲಿ ನೋಡಿದರೂ ಬರೀ ಕಾಂತಾರ ಸಿನಿಮಾದ್ದೇ ಸದ್ದು. ಯಾಕಂದ್ರೆ ಮೂರು ವರ್ಷಗಳ ಹಿಂದೆ ತೆರೆಕಂಡು ವಿಶ್ವದಾದ್ಯಂತ ಮೋಡಿ ಮಾಡಿದ್ದ ಕಾಂತಾರ ಇದೀಗ ಪ್ರೇಕ್ಷಕರನ್ನ ದಟ್ಟ ಕಾನನದ ನಡುವೆ ಕರೆದೊಯ್ದು ಇತಿಹಾಸ ಬಿಚ್ಚಿಟ್ಟಿದೆ. ಹೌದು, ಕಾಂತಾರ ಸೂಪರ್ ಹಿಟ್ ಆದ ಬಳಿಕ ಇಂದು ಕಾಂತಾರ ಚಾಪ್ಟರ್- 1 ರಿಲೀಸ್ ಆಗಿದ್ದು, ಮತ್ತೊಮ್ಮೆ ಎಲ್ಲರೂ ಬೆರಗಾಗುವಂತೆ ಮಾಡಿದೆ. ಕ್ರಿ.ಶ. 400 – 500ರ ಕಾಲಘಟ್ಟದ ಕಥೆ ಹೇಳಿರುವ ನಟ ರಿಷಬ್ ಶೆಟ್ಟಿ ತೆರೆಯ ಮೇಲೆ ರೌದ್ರಾವತಾರ ತಾಳಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್
ಇಂದು ವಿಶ್ವದಾದ್ಯಂತ 7 ಸಾವಿರ ಸ್ಕ್ರೀನ್‌ಗಳಲ್ಲಿ ಏಳು ಭಾಷೆಗಳಲ್ಲಿ ತೆರೆ ಕಂಡಿರುವ ಕಾಂತಾರ ಪಾರ್ಟ್ 1 ಸಿನಿಮಾವನ್ನ ನೋಡಿದ ಸಿನಿರಸಿಕರು ಫಿದಾ ಆಗುವಂತೆ ಮಾಡಿದೆ. ತೆರೆಯ ಮೇಲೆ ನಟ ರಿಷಬ್ ಶೆಟ್ಟಿಯ ಆರ್ಭಟವಂತೂ ಪ್ರೇಕ್ಷಕರು ಕುಳಿತಲ್ಲಿಯೇ ಬೆವರುವಂತೆ ಮಾಡಿದೆ. ಇನ್ನು ದಸರಾ ವೇಳೆಯಲ್ಲಿಯೇ ಕಾಂತಾರ-1 ರಿಲೀಸ್ ಆಗಿದ್ದು, ಹಬ್ಬದ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕದಂಬ ಸಾಮಂತರಾದ ಬಾಂಗ್ರಾ ರಾಜ ಮನೆತನ ಮತ್ತು ಈಶ್ವರನ ಹೂದೋಟದ ಜನರ ನಡುವಿನ ಯುದ್ಧವನ್ನೇ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಅದರಲ್ಲೂ ಬೆರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿ ಪ್ರೇಕ್ಷಕರನ್ನ ಸೀಟಿನ ಅಂಚಿಗೆ ತಂದು ಕೂರಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್