– ಚಿತ್ರ ಸಕ್ಸಸ್ ಹಿನ್ನೆಲೆ ಹರಕೆ ಸಲ್ಲಿಸಿದ ರಿಷಬ್ ಶೆಟ್ಟಿ ಟೀಂ
ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ನೂರಾರು ಕೋಟಿ ಲಾಭ ಗಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ನೀಡಿದ ಚಿತ್ರದ ಮೂಲ ತುಳುನಾಡಿನ ದೈವಾರಾಧನೆ. ಚಿತ್ರದ ಯಶಸ್ಸಿನ ಹಿನ್ನೆಲೆ ವಾರಾಹಿ ಪಂಜುರ್ಲಿ ದೈವಕ್ಕೆ ಮಂಗಳೂರಿನಲ್ಲಿ ಕಾಂತಾರ ಚಿತ್ರತಂಡದಿಂದ ಹರಕೆಯ ನೇಮೋತ್ಸವ ಸಲ್ಲಿಸಲಾಯಿತು.
ಕಾಂತಾರ ಸಿನಿಮಾ ಕನ್ನಡ ಚಿತ್ರ ರಂಗದ ದೊಡ್ಡ ಮೈಲುಗಲ್ಲು. ರಿಷಬ್ ಶೆಟ್ಟಿಯನ್ನು (Rishab Shetty) ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಚಿತ್ರ. ಕಾಂತಾರ ಎರಡು ಚಾಪ್ಟರ್‌ಗಳ ಕಥಾ ಹಂದರವೇ ತುಳುನಾಡಿನ ದೈವ. ಕಾಂತಾರ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ಕಂಡು, ಚಿತ್ರತಂಡ ಗೆದ್ದು ಬಿಗಿದೆ. ನಿರ್ಮಾಪಕರಿಗೆ ನೂರಾರು ಕೋಟಿ ಲಾಭ ತಂದಿದೆ. ಹೀಗಾಗಿ, ಮಂಗಳೂರಿನ ಬಾರೆಬೈಲ್ ಶ್ರೀ ಅರಸು ಧರ್ಮ ಜಾರಂದಾಯ, ಬಂಟ ಹಾಗೂ ವಾರಾಹಿ ದೈಸ್ಥಾನದಲ್ಲಿ ಹರಕೆಯ ನೇಮೋತ್ಸವ ಸಲ್ಲಿಸಲಾಯಿತು.

ಸಿನಿಮಾ ನಿರ್ಮಾಣಕ್ಕೂ ಮೊದಲು ಸಿನಿಮಾ ಯಶಸ್ವಿಗಾಗಿ ಪ್ರಾರ್ಥಿಸಿ ಚಿತ್ರತಂಡದವರು ಹರಕೆ ಹೊತ್ತಿದ್ದರು. ದೈವದ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ, ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಸಲ್ಲಿಸಿದ್ರು. ದೈವದ ನೇಮೋತ್ಸವದಲ್ಲಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿದ್ದರು. ದೈವದ ಪ್ರಸಾದ ಸ್ವೀಕರಿಸಿ ದೈವಾನುಗ್ರಹಕ್ಕೆ ಪಾತ್ರರಾದರು.

