ಶನಿವಾರ ತಮಿಳುನಾಡಿನ ಕರೂರ್‌ನಲ್ಲಿ ಕಾಲ್ತುಳಿತ (Karur Stampede) ಪ್ರಕರಣದಲ್ಲಿ 41 ಜನರು ಸತ್ತಿದ್ದು ನೂರಾರು ಜನರು ಗಾಯಗೊಂಡಿದ್ದಾರೆ. ಇಡೀ ತಮಿಳುನಾಡು ರಾಜ್ಯವೇ ದುಃಖದಲ್ಲಿ ಮುಳುಗಿದೆ. ಈ ದುಃಖದಲ್ಲಿ ಕಾಂತಾರ ಸಿನಿಮಾ ತಂಡವೂ ಭಾಗಿಯಾಗಲು ನಿರ್ಧರಿಸಿದೆ. ಹೀಗಾಗಿ ಮಂಗಳವಾರ ಚೆನ್ನೈ ನಡೆಯಬೇಕಿದ್ದ ಕಾಂತಾರ ಸುದ್ದಿಗೋಷ್ಠಿಯನ್ನು ಚಿತ್ರ ತಂಡ ರದ್ದುಮಾಡಿದೆ.
ಹೊಂಬಾಳೆ ಫಿಲಂಸ್ (Hombale Films) ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡ ಎಂಬರ್ಥದಲ್ಲಿ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ವಿವಾದಿತ ಸ್ಪರ್ಧಿಗಳು!
Due to the recent unfortunate incident, we are cancelling the #KantaraChapter1 promotional event in Chennai tomorrow.
Our thoughts and prayers are with those affected.
Thank you for your understanding, we look forward to meeting our audience in Tamil Nadu at a more appropriate… pic.twitter.com/ROhmiu6glR
— Hombale Films (@hombalefilms) September 29, 2025
ಕಾಲ್ತುಳಿತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ನಿಮ್ಮ ನೋವಿನಲ್ಲಿ ನಾವೂ ಪಾಲುದಾರರು ಎಂದಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ ರಿಷಬ್ ಶೆಟ್ಟಿ ಇದು ಕಷ್ಟದಲ್ಲಿದ್ದವರಿಗೆ ಜೊತೆಯಾಗಬೇಕಾದ ಸಮಯ, ಹೀಗಾಗಿ ಕಾರ್ಯಕ್ರಮ ರದ್ದು ಮಾಡುತ್ತಿದ್ದೇವೆ. ತಮಿಳುನಾಡು ಪ್ರೇಕ್ಷಕರನ್ನು ಆದಷ್ಟು ಬೇಗ ಭೇಟಿಯಾಗುತ್ತೇವೆ ಎಂದು ಹೇಳುವ ಮೂಲಕ ಕಾಂತಾರ ಇವೆಂಟ್ ಕ್ಯಾನ್ಸಲ್ ಮಾಡಿಕೊಂಡಿದೆ.

