ಕೇರಳದಲ್ಲೂ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಕಮಾಲ್ ಮಾಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ಎಂಬ ದಾಖಲೆಯನ್ನು ಕಾಂತಾರ ಬರೆದಿದೆ.
2022 ರಲ್ಲಿ ಕೇರಳದಲ್ಲಿ (Kerala) ಬಿಡುಗಡೆಯಾಗಿದ್ದ ಕಾಂತಾರ ಗಳಿಕೆಯನ್ನೂ ಕಾಂತಾರ ಚಾಪ್ಟರ್ 1 ಮೀರಿಸಲು ಸಜ್ಜಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ 2 ನೇ ಕನ್ನಡ ಚಿತ್ರವಾಗುವ ಹಾದಿಯಲ್ಲಿದೆ. ಇದನ್ನೂ ಓದಿ: ದೇಶದ ಎಲ್ಲಾ ನಿರ್ಮಾಪಕರು ಈ ಪ್ರಯತ್ನ ನೋಡಿ ನಾಚಿಕೆಪಡಬೇಕು; ರಿಷಬ್ ಕೊಂಡಾಡಿದ ವರ್ಮಾ
ಕೇರಳದಿಂದ 20 ಕೋಟಿ ರೂ. ದಾಟಿದ ಎರಡನೇ ಕನ್ನಡ ಚಿತ್ರ ಎಂಬ ದಾಖಲೆಯನ್ನೂ ಕಾಂತಾರ ಬರೆಯಲಿದೆ. ರಾಜ್ಯದಲ್ಲಿ ವರ್ಷದ ಅತಿ ದೊಡ್ಡ ಕನ್ನಡ ಗಳಿಕೆ ಸಿನಿಮಾವಾಗಿ ಹೊರಹೊಮ್ಮಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಇದೇ ಅ.2 ರಂದು ವಿಶ್ವದಾದ್ಯಂತ ತೆರೆ ಕಂಡಿತು. ಕನ್ನಡ, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ತೆರೆಗೆ ಬಂದಿದೆ. ರಿಷಬ್ ಶೆಟ್ಟಿ ನಟನೆ, ಸಿನಿಮಾ ಮೇಕಿಂಗ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೊಂದು ಬ್ಲಾಕ್‌ಬಸ್ಟರ್ ಮೂವಿ ಎಂದು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್ ಸಿಂಹ
ರಿಲೀಸ್ ಆದ ಮೂರೇ ದಿನದಲ್ಲಿ ಕಾಂತಾರ ಸಿನಿಮಾ 160 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.