ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಬಿಡುಗಡೆ ಆಗಿ 25 ದಿನಗಳಾಗಿವೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ನೀಡಿರುವ ಲೆಕ್ಕಾಚಾರದ ಪ್ರಕಾರ `ಕಾಂತಾರ: ಚಾಪ್ಟರ್ 1′ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 818 ಕೋಟಿಗೂ ಹೆಚ್ಚು ಮೊತ್ತವನ್ನು ಈಗಾಗಲೇ ಗಳಿಕೆ ಮಾಡಿದೆ. ಇದೀಗ ವಿಶ್ವ ಬಾಕ್ಸಾಫೀಸ್‌ನಲ್ಲಿ ಮಾತ್ರವಲ್ಲದೆ ಭಾರತೀಯ ಬಾಕ್ಸಾಫೀಸ್‌ನಲ್ಲಿಯೂ ಸಿನಿಮಾದ ಕಲೆಕ್ಷನ್ ಬಲು ಜೋರಾಗಿದೆ. ಅದರಲ್ಲೂ ಸಿನಿಮಾದ ಹಿಂದಿ ಆವೃತ್ತಿ ಗಳಿಕೆಯಲ್ಲಿ ದಾಖಲೆಯನ್ನೇ ಬರೆಯುತ್ತಿದೆ.
`ಕಾಂತಾರ ಚಾಪ್ಟರ್ 1′ ಸಿನಿಮಾ ಈ ವರ್ಷ ಈವರೆಗೆ ಬಿಡುಗಡೆ ಆದ ಯಾವುದೇ ಸಿನಿಮಾಕ್ಕಿಂತಲೂ ಹೆಚ್ಚಿನ ಗಳಿಕೆಯನ್ನು ಬಾಕ್ಸಾಫೀಸ್‌ನಲ್ಲಿ ಈಗಾಗಲೇ ಮಾಡಿದೆ. ಈ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಮೊತ್ತ ಗಳಿಸಿದ ಸಿನಿಮಾ ಎನಿಸಿಕೊಂಡಿದೆ `ಕಾಂತಾರ: ಚಾಪ್ಟರ್ 1′. ಸಿನಿಮಾ ಅತಿ ಶೀಘ್ರದಲ್ಲಿಯೇ ವಿಶ್ವ ಬಾಕ್ಸಾಫೀಸ್‌ನಲ್ಲಿ 1,000 ಕೋಟಿ ಕಲೆಕ್ಷನ್ ಮಾಡಲಿರುವುದು ಪಕ್ಕಾ ಆಗಿದೆ.
ಇನ್ನು ಸಿನಿಮಾದ ಹಿಂದಿ ಆವೃತ್ತಿಯ ಕಲೆಕ್ಷನ್ ಸಹ ಬಲು ಜೋರಾಗಿದೆ. ಸಿನಿಮಾದ ಹಿಂದಿ ಆವೃತ್ತಿ ಮಾತ್ರವೇ 200 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸಾಫೀಸ್‌ನಲ್ಲಿ ಈಗಾಗಲೇ ದೋಚಿದೆ. ಪರಭಾಷಾ ಸಿನಿಮಾ ಒಂದು ಹಿಂದಿ ಪ್ರದೇಶದಲ್ಲಿ 200 ಕೋಟಿ ಗಳಿಸುವುದು ಅದೂ ಒಂದು ತಿಂಗಳ ಮುಂಚೆಯೇ ಸಾಮಾನ್ಯ ಸಾಧನೆಯಲ್ಲ. `ಪುಷ್ಪ 2′ ಹೊರತುಪಡಿಸಿದರೆ ಇತ್ತೀಚೆಗಿನ ಇನ್ಯಾವ ಸಿನಿಮಾ ಸಹ ಈ ಸಾಧನೆ ಮಾಡಿಲ್ಲ. ಇದೀಗ ಕಾಂತಾರ ಸಿನಿಮಾ ಆ ಸಾಧನೆಯನ್ನ ಮಾಡಿರೋದು ಇಡೀ ಸ್ಯಾಂಡಲ್‌ವುಡ್ ಹೆಮ್ಮೆಪಡುವ ವಿಚಾರ. ಇನ್ನು ಇದೇ ಅಕ್ಟೋಬರ್ 31ರಂದು ಕಾಂತಾರ ಚಾಪ್ಟರ್-1 ಇಂಗ್ಲೀಷ್ ವರ್ಷನ್ ರಿಲೀಸ್ ಆಗಲಿದೆ.

