ಮೂರು ದಿನಕ್ಕೆ ‘ಕಾಂತಾರ’ ಬಾಕ್ಸ್ ಆಫೀಸ್ ಗಳಿಕೆ : ಸಿನಿ ಪಂಡಿತರ ಪಕ್ಕಾ ಲೆಕ್ಕಾಚಾರ

Public TV
1 Min Read
kantara 1

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದೇ ರೀತಿಯ ಥಿಯೇಟರ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ (Box Office) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಶುಕ್ರವಾರ ಕಡಿಮೆ ಸಂಖ್ಯೆಯ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಆಗಿತ್ತು. ನೋಡುಗರು ಅದ್ಭುತ ಪ್ರತಿಕ್ರಿಯೆ ಕೊಟ್ಟಿದ್ದರಿಂದ, ಸಂಖ್ಯೆ ಹೆಚ್ಚಾಗಿದೆ.

kantara 1 1

ಸಿನಿಮಾ ತಂಡವೇ ಹೇಳಿಕೊಂಡಂತೆ ರಿಷಬ್ ಶೆಟ್ಟಿ (Rishabh Shetty) ಅವರ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರಕ್ಕೆ ಹೆಚ್ಚು ಹಣ ಬಂದಿದೆಯಂತೆ. ಅದರಲ್ಲೂ ಮೊದಲ ಮೂರು ದಿನಗಳಲ್ಲೂ ಅತೀ ಹೆಚ್ಚು ಹಣ ಮಾಡಿದೆಯಂತೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಮೂರು ದಿನಗಳ ಕಾಲ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಮೂರು ದಿನಗಳ ಟಿಕೆಟ್ ಫಾಸ್ಟ್ ಫಿಲಿಂಗ್ ಆಗುತ್ತಿವೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

kantara 1

ಸ್ಯಾಂಡಲ್ ವುಡ್ ಟ್ರೇಡ್ ಅನಲಿಸ್ಟ್ ಗಳ ಪ್ರಕಾರ ಈ ಸಿನಿಮಾ ರಿಲೀಸ್ ಆದ ದಿನ (ಶುಕ್ರವಾರ) 5 ರಿಂದ 6 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗಿತ್ತು. ಎರಡನೇ ದಿನ (ಶನಿವಾರ) 8 ಕೋಟಿ, ಮೂರನೇ ದಿನ (ರವಿವಾರ) 10 ಕೋಟಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಮೂರನೇ ದಿನಕ್ಕೆ 23 ಕೋಟಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ.

kantara 2

ರಿಷಬ್ ಶೆಟ್ಟಿ ನಿರ್ದೇಶಿಸಿ, ಈ ಸಿನಿಮಾದಲ್ಲಿ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣ ಮಾಡಿದೆ. ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದು, ಅದ್ದೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ವಿಜಯ್ ಕಿರಗಂದೂರ್, ತೆಲುಗಿನ ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *