ಕಾಂತಾರ (Kantar) ಸಿನಿಮಾ ಮೂಲಕ ದೇಶದ ಗಮನ ಸೆಳೆದಿರುವ ಸಪ್ತಮಿ ಗೌಡ (Saptami Gowda) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕರು ಸಪ್ತಮಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅದರಲ್ಲೂ ಸಪ್ತಮಿ ಗೌಡ ಕೈಲಿ ಸಾಲು ಸಾಲು ಚಿತ್ರಗಳಿದ್ದು, ಚಿತ್ರತಂಡದಿಂದಲೂ ಶುಭಾಶಯಗಳ ಹಾರೈಕೆ ಹರಿದು ಬಂದಿದೆ.
Advertisement
ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಡಾಲಿಗೆ ನಾಯಕಿಯಾಗಿ ಮೊದಲ ಸಿನಿಮಾದಲ್ಲೇ ಸೈ ಎನಿಸಿಕೊಂಡರು. ಬಳಿಕ `ಕಾಂತಾರ’ (Kantara) ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದರು. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಮರಳಿದ ‘ಬಿಗ್ ಬಾಸ್’ ಚೈತ್ರಾ ಹಳ್ಳಿಕೇರಿ
Advertisement
Advertisement
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ದಿ ವಾಕ್ಸಿನ್ ವಾರ್’ ಚಿತ್ರದಲ್ಲಿ ಕೂಡ ಸಪ್ತಮಿ (Saptami Gowda) ಮೇಜರ್ ರೋಲ್ ಪ್ಲೈ ಮಾಡ್ತಿದ್ದಾರೆ. ಈ ಮೂಲಕ ಬಿಟೌನ್ ಅಂಗಳಕ್ಕೂ ನಟಿ ಲಗ್ಗೆ ಇಟ್ಟಿದ್ದಾರೆ. ಈಗಾಗಲೇ ಹಲವು ಹಂತದ ಚಿತ್ರೀಕರಣದಲ್ಲೂ ಅವರು ಭಾಗಿಯಾಗಿದ್ದಾರೆ. ಅದೊಂದು ಮಹತ್ವದ ಪಾತ್ರವೆಂದು ಹೇಳಿಕೊಂಡಿದ್ದಾರೆ.
Advertisement
ಯುವ ಸಿನಿಮಾಗೂ ಸಪ್ತಮಿ ಗೌಡ ನಾಯಕಿ. ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೇ ಒಂದು ರೋಚಕ. ಶನಿವಾರ (ಫೆ.4)ರಂದು ಸಂಜೆ ಕೆಸಿಸಿ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ನಟಿ ಸಪ್ತಮಿ ತೆರಳುತ್ತಿದ್ದರು. ಈ ವೇಳೆ ಹೊಂಬಾಳೆ ಸಂಸ್ಥೆ ಟೀಂ ಕಡೆಯಿಂದ ನಟಿಗೆ ಕಾಲ್ ಬಂದಿದೆ. ಆಫೀಸ್ಗೆ ಬನ್ನಿ ಎಂದಷ್ಟೇ ಹೇಳಲಾಗಿದೆ. ಬಳಿದ ಚಿತ್ರತಂಡಕ್ಕೆ ಸಪ್ತಮಿ ಭೇಟಿ ನೀಡಿದ್ದಾರೆ. ಬಳಿಕ ಯುವ ರಾಜ್ಕುಮಾರ್ (Yuva Rajkumar) ಅವರ ಪಕ್ಕ ನಿಲ್ಲಿಸಿ ಫೋಟೋ ಕ್ಲಿಕ್ಕಿಸಲಾಗಿದೆ. ನಂತರ `ಯುವ’ ಚಿತ್ರಕ್ಕೆ ನೀವೇ ಹೀರೋಯಿನ್ ಎಂದು ಸರ್ಪ್ರೈಸ್ ನೀಡಿದ್ದಾರೆ.
ಪೈಲ್ವಾನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಇದೀಗ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಅವರಿಗೆ ಸಿನಿಮಾವೊಂದು ಮಾಡುತ್ತಿದ್ದು, ಈಗಾಗಲೇ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಈ ಸಿನಿಮಾಗೂ ಸಪ್ತಮಿಯೇ ನಾಯಕಿ. ಇನ್ನಷ್ಟೇ ಶೂಟಿಂಗ್ ಆರಂಭವಾಗಬೇಕು.