ಕಾಂತಾರ ಬೆಡಗಿ ಸಪ್ತಮಿಗೌಡ (Saptami Gowda) `ಯುವ’ ಸಿನಿಮಾದ ನಂತರ ಬಿಗ್ ಬ್ರೇಕ್ ತೆಗೆದುಕೊಂಡಿದ್ದಾರೆ. ಇದೇ ವರ್ಷ ತೆರೆಕಂಡ ಯುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಪ್ತಮಿ ಮತ್ತೆ ಕನ್ನಡದಲ್ಲಿ ಯಾವ ಸಿನಿಮಾ ಅಂತಾ ಅನೌನ್ಸ್ ಮಾಡಿಲ್ಲ. ಏತನ್ಮಧ್ಯೆ ತೆಲುಗು ಪ್ರಾಜೆಕ್ಟ್‌ನಲ್ಲಿ ಮಾಡೋದಾಗಿ `ಯುವ’ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಹೇಳಿಕೊಂಡಿದ್ದರು. ಅದಕ್ಕಾಗಿ ಸಾಕಷ್ಟು ರೀತಿಯಲ್ಲಿ ತಯಾರಿಯನ್ನೂ ಕೂಡಾ ಮಾಡಿಕೊಂಡಿದ್ದರಂತೆ ಸಪ್ತಮಿಗೌಡ.
ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಸಪ್ತಮಿ ಗೌಡ ವಿದೇಶದಲ್ಲಿ ಓಡಾಟ ನಡೆಸಿದ್ದಾರೆ. ಅಮೆರಿಕಾದ ಪ್ರಸಿದ್ಧ ಸ್ಥಳಗಳಲ್ಲಿ ಸಖತ್ ಎಂಜಾಯ್ ಮಾಡ್ತಿರುವ ಸಪ್ತಮಿ ಹಾಲಿವುಡ್‌ಗೂ ಭೇಟಿ ಕೊಟ್ಟಿದ್ದಾರೆ. ಹಾಲಿವುಡ್‌ನ (Hollywood) ಮಾರ್ವೆಲ್ ಸ್ಟುಡಿಯೋಗೂ ಭೇಟಿ ಕೊಟ್ಟಿದ್ದು, ಸಿನಿಮಾದ ಶೂಟ್ ಆಗ್ಲಿ ಅಥವಾ ಯಾವುದೇ ಆ್ಯಡ್ ಬಗ್ಗೆ ಮಾತುಕತೆಗಾಗ್ಲಿ ಅಲ್ಲ. ಬದಲಾಗಿ ಈ ಬಿಡುವಿನ ಸಮಯವನ್ನ ಕಳೆಯುವುದಕ್ಕೆ ಅಮೆರಿಕಾದ ಬೀದಿ ಬೀದಿ ಸುತ್ತಾಟ ನಡೆಸಿದ್ದಾರೆ.
ನ್ಯೂಯಾರ್ಕ್ (New York), ಕ್ಯಾಲಿಫೋರ್ನಿಯ, ಮಾರ್ವೆಲ್ ಸ್ಟುಡಿಯೋಗೆ ಭೇಟಿಕೊಟ್ಟ ವೇಳೆ ಕ್ಲಿಕ್ಕಿಸಿಕೊಂಡ ಬ್ಯೂಟಿಫುಲ್ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಪ್ತಮಿಗೌಡರ ಫೋಟೋ ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. `ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ `ಕಾಂತಾರ’ ಮೂಲಕ ನ್ಯಾಷನಲ್ ಲೆವೆಲ್‌ನಲ್ಲಿ ಅಟ್ರ್ಯಾಕ್ಟ್ ಮಾಡಿದ್ದಾರೆ.
`ಕಾಂತಾರ’ ಸಿನಿಮಾದ ನಂತರ ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದ ಯುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಸದ್ಯ ಬಿಗ್ ಬ್ರೇಕ್ ತೆಗೆದುಕೊಂಡಿರುವ ಸಪ್ತಮಿ ಸದ್ಯ ವಿದೇಶದಲ್ಲಿ ಬಿಂದಾಸ್ ಆಗಿ, ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ.