ಗೋವಾ ಚಿತ್ರೋತ್ಸವದಲ್ಲಿ ಕಾಂತಾರ

Public TV
2 Min Read
Kantara 3

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Chirotsava) ಆಯ್ಕೆಯಾಗಿದೆ. ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಸಿನಿಮೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿರುವ ಕಾಂತಾರ ಸಿನಿಮಾ, ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿತ್ತು. ಇದೀಗ ಸಿನಿಮೋತ್ಸವಕ್ಕೂ ಆಯ್ಕೆಯಾಗಿದೆ.

Kantara 2

ಶುರುವಾಗಬೇಕಿದೆ ಕಾಂತರ 2

‘ಕಾಂತಾರ 2’ ಸಿನಿಮಾದ ಶೂಟಿಂಗ್ (Shooting) ಯಾವಾಗಿಂದ ಶುರುವಾಗಬಹುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ ಹೋಗುವುದಾಗಿ ರಿಷಬ್ ತಿಳಿಸಿದ್ದಾರೆ. ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ರಿಷಬ್ ಸದ್ಯ ಬ್ಯುಸಿಯಾಗಿದ್ದಾರೆ.

KANTARA

ಸಿನಿಮಾ ಶೂಟಿಂಗ್ ಗಾಗಿ ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ ರಿಷಬ್. ಕಾಂತಾರ ಸಿನಿಮಾ ಕೇವಲ ಅವರ ಊರಿನಲ್ಲಿ ಮಾತ್ರ ಚಿತ್ರೀಕರಣವಾಗಿತ್ತು. ಈ ಬಾರಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ. ಈಗಾಗಲೇ ಆ ಸ್ಥಳಗಳನ್ನು ಅವರು ನೋಡಿಕೊಂಡೂ ಬಂದಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕಥೆಗೆ ತಕ್ಕಂತೆ ಬಜೆಟ್ ಖರ್ಚು ಮಾಡುವ ಕುರಿತಾಗಿಯೂ ಅವರು ಮಾತನಾಡಿದ್ದಾರೆ.

KANTARA 7

‘ಕಾಂತಾರ 2’ (Kantara 2) ಸಿನಿಮಾದ ಬಜೆಟ್ (Budget) ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕಾಂತಾರ ಸಿನಿಮಾದ ಬಜೆಟ್ ಗಿಂತ ಎರಡ್ಮೂರು ಪಟ್ಟು ಹೆಚ್ಚಿನ ಬಜೆಟ್ ಬೇಡುವಂತಹ ಚಿತ್ರ ಇದಾಗಲಿದೆ ಎಂದು ಹೇಳಲಾಗಿತ್ತು. ಆದರೆ, ನಿಜವಾದ ಬಜೆಟ್ ಅನ್ನು ರಾಜ್ ಬಿ ಶೆಟ್ಟಿ  (Raj B Shetty) ಬಾಯ್ಬಿಟ್ಟಿದ್ದಾರೆ.

KANTARA 6

ಸದ್ಯ ರಾಜ್ ಬಿ ಶೆಟ್ಟಿ ಅವರ ಟೋಬಿ ಸಿನಿಮಾ ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಕೇರಳದಲ್ಲಿ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಮಾಧ್ಯಮವೊಂದರ ಜೊತೆ ಮಾತನಾಡಿರುವ ರಾಜ್ ಬಿ ಶೆಟ್ಟಿ ಕಾಂತಾರ 2 ಸಿನಿಮಾದ ಅಂದಾಜು ಬಜೆಟ್ ಅನ್ನು ಹೇಳಿಕೊಂಡಿದ್ದಾರೆ. ಇದು ನೂರು ಕೋಟಿ ಬೇಡುವಂತಹ ಚಿತ್ರ ಎಂದು ಮಾತನಾಡಿದ್ದಾರೆ.

 

ಕಾಂತಾರ 2 ಸಿನಿಮಾ ಸ್ಕ್ರಿಪ್ಟ್  ಹಂತದಲ್ಲಿದೆ. ಇದು ನೂರಾರು ಕೋಟಿ ಬಜೆಟ್ ನಲ್ಲಿ ತಯಾರಾಗುವಂತಹ ಬಿಗ್ ಬಜೆಟ್ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲಿಗೆ ಕಾಂತಾರ 2 ಸಿನಿಮಾದ ಬಜೆಟ್ ಬಹಿರಂಗವಾಗಿದೆ. ಇದರ ಜೊತೆಗೆ ಚಾರ್ಲಿ ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ಚಾರ್ಲಿ 2 ಸಿನಿಮಾ ಬರುವುದಕ್ಕೆ ಸಾಧ್ಯವೆ ಇಲ್ಲ. ನಿರ್ದೇಶಕರು ಬೇರೆ ಕಥೆಯಲ್ಲಿ ಮಗ್ನರಾಗಿದ್ದಾರೆ ಎಂದಿದ್ದಾರೆ.

Web Stories

Share This Article