ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ (Kantara Film) ಸಿನಿಮಾ ನೋಡಿ ಚಿತ್ರಪ್ರೇಮಿಗಳು, ಪರಭಾಷೆಯ ನಟ-ನಟಿಯರು ಸೆಲ್ಯೂಟ್ ಹೊಡೆದಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಈ ಚಿತ್ರವನ್ನು ಕೊಂಡಾಡಿದ್ದರು. ಇದೀಗ ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಪುಟಾಣಿ ಮಗುವಿನ ಪ್ರತಿಕ್ರಿಯೆ ಹೇಗಿತ್ತು ಎಂದು ರಿಷಬ್ (Rishab Shetty) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೀರೋಯಿನ್ ಆದ ಖ್ಯಾತ ಯೂಟ್ಯೂಬರ್ ನಿಹಾರಿಕಾ
ಇದೀಗ ಪುಟ್ಟ ಹೆಣ್ಣುಮಗುವೊಂದು ಕ್ಲೈಮ್ಯಾಕ್ಸ್ ನೋಡುತ್ತಾ, ಕೂಗುತ್ತಾ, ತಲ್ಲೀನವಾಗಿರುವ ವಿಡಿಯೋವೊಂದನ್ನು ಎಕ್ಸ್‌ನಲ್ಲಿ ಸ್ವತಃ ರಿಷಬ್ ಶೆಟ್ಟಿ ರೀ ಶೇರ್ ಮಾಡಿದ್ದಾರೆ. ಇದಕ್ಕೆ ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿಗಳನ್ನು ಹಾಕಿ ಧನ್ಯವಾದ ಕೂಡಾ ಎಮೋಜಿಯಲ್ಲೇ ಹೇಳಿದ್ದಾರೆ.
???????????????? https://t.co/7udRfnrZq8
— Rishab Shetty (@shetty_rishab) May 20, 2024
ಇದನ್ನು ಮೊದಲು ಶ್ರೀರಾಮ್ ಎಂಬವರು ಹಂಚಿಕೊಂಡಿದ್ದು, ಆಧ್ಯಾತ್ಮ ಎಂಬುದು ಮಗುವಿನ ಹೃದಯವನ್ನು ಹೊಕ್ಕಾಗ ಅದೊಂದು ಮ್ಯಾಜಿಕ್ ಆಗುತ್ತದೆ ಎಂದು ಅಡಿಬರಹ ನೀಡಿದ್ದರು. ಈ ವಿಡಿಯೋಗೆ ಅಪಾರ ಮೆಚ್ಚುಗೆ ಹರಿದು ಬಂದಿದೆ.
ಅಂದಹಾಗೆ, ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ 22) ಕುಟುಂಬದ ಜೊತೆ ಚಿಕ್ಕಮಗಳೂರಿನ ಹರಿಹರಪುರದ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ರಿಷಬ್ ದರ್ಶನ ಪಡೆದಿದ್ದಾರೆ. ಜೊತೆಗೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೂ ಕೂಡ ಭೇಟಿ ನೀಡಿದ್ದಾರೆ.