ಐಪಿಎಲ್ 17ನೇ ಆವೃತ್ತಿ ಶುರುವಾಗಲು ಇನ್ನೇನು ಕೆಲವು ದಿನಗಳು ಬಾಕಿಯಿದೆ. ಈ ಬಾರಿಯಾದರೂ ಐಪಿಎಲ್ ಕಪ್ ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್. ಇದೀಗ ಆರ್‌ಸಿಬಿ (RCB) ಕೋಣಗಳ ಜೊತೆ ‘ಕಾಂತಾರ’ (Kantara) ಶಿವ ಎಂಟ್ರಿ ಕೊಟ್ಟಿದ್ದಾರೆ. ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.
ಆರ್‌ಸಿಬಿ ತಂಡದ ಜೊತೆ ಈ ಬಾರಿ ಕಾಂತಾರ ರಿಷಬ್ ಶೆಟ್ಟಿ (Rishab Shetty) ಕೈಜೋಡಿಸಿದ್ದಾರೆ. ಆರ್‌ಸಿಬಿ ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಆರ್‌ಸಿಬಿಗೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಅಜ್ಜನ ಜೊತೆ ಉಪಾಸನಾ
ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಈ ಬಾರಿ ಆದರೂ ಆರ್‌ಸಿಬಿ ತಂಡ ಕಪ್ ಎತ್ತಿ ಹಿಡಿಯುತ್ತಾ ಎಂದು ಕ್ರಿಕೆಟ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಮತ್ತೊಂದು ಕಡೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಆರ್‌ಸಿಬಿ ಅಭಿಮಾನಿಗಳ ಬಹಳ ದಿನಗಳ ಬೇಡಿಕೆಯನ್ನು ಆರ್‌ಸಿಬಿ ತಂಡದ ಮಾಲೀಕರು ಈ ಬಾರಿ ಈಡೇರಿಸುತ್ತಿದ್ದಾರೆ. ಆ ಬಗ್ಗೆ ರಿಷಬ್ ಸುಳಿವು ಕೊಟ್ಟಿದ್ದಾರೆ.
View this post on Instagram
ರಿಷಬ್ ಶೆಟ್ಟಿ ಏನು ಹೇಳ್ತಿದ್ದಾರೆ ಅರ್ಥ ಆಯ್ತಾ? ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋ ರಿಲೀಸ್ ಆಗಿದೆ. ಇದರಲ್ಲಿ Bangalore ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, ಭಟ್ರೆ ತಗೊಂಡೋಗಿ ಎಂದು ರಿಷಬ್ ಹೇಳುತ್ತಾರೆ. ಇದು ಅರ್ಥ ಆಯ್ತಾ? ಎಂದು ಕೇಳಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರು ಎನ್ನುವುದನ್ನು ಇಂಗ್ಲೀಷ್‌ನಲ್ಲಿ ಬರೆಯುವಾಗ ಮತ್ತು ಉಚ್ಛರಿಸುವಾಗ ಸಣ್ಣ ಬದಲಾವಣೆ ಮಾಡಲಾಗಿತ್ತು.
Bangalore ಎನ್ನುವುದನ್ನು Bengaluru ಎಂದು ಬದಲಾಯಿಸಿದ್ದರು. ಆರ್‌ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಇದೀಗ ರಿಷಬ್ ಶೆಟ್ಟಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಧಿಕೃತವಾಗಿ ಇದು ಗೊತ್ತಾಗಲಿದೆ.