‘ಕಾಂತಾರ’ (Kantara) ಸಿನಿಮಾ ಮೂಲಕ ಕರ್ನಾಟಕದ ತುಳುನಾಡ ದೈವದ ಕಥೆಯನ್ನು ಇಡೀ ದೇಶಕ್ಕೆ ತಲುಪಿಸಿದ ರಿಷಬ್ ಶೆಟ್ಟಿ (Rishab Shetty) ಅವರು ಇಂದು (ಜ.22) ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪತ್ನಿ ಪ್ರಗತಿ ಜೊತೆ ಭಾಗಿಯಾಗಿದ್ದಾರೆ. ಈ ಕುರಿತ ಸುಂದರ ಫೋಟೋವನ್ನು ರಿಷಬ್ ಹಂಚಿಕೊಂಡಿದ್ದಾರೆ.
Advertisement
500 ವರ್ಷಗಳ ನಂತರ ಎಲ್ಲರ ಕನಸು ನನಸಾಗಿದೆ. ಇಂದು ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದಲ್ಲಿ ಭಾಗಿಯಾಗಿರೋದಕ್ಕೆ ರಿಷಬ್ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮರ್ಯಾದಾ ಪುರುಷೋತ್ತಮ ರಾಮನಿಗೆ ನಮನ ಸಲ್ಲಿಸಿ ಗುಣಗಾನ ಮಾಡಿದ ಯಶ್
Advertisement
View this post on Instagram
Advertisement
ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಎಂದು ಶೀರ್ಷಿಕೆ ಕೊಟ್ಟು ರಾಮಮಂದಿರದ ಮುಂದೆ ನಿಂತು ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ, ರಿಷಬ್ ದಂಪತಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕೂಡ ಭೇಟಿಯಾಗಿದ್ದಾರೆ.
Advertisement
ಅಯೋಧ್ಯೆಯ ಇಂದಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಕಂಗನಾ, ಆಲಿಯಾ- ರಣ್‌ಬೀರ್ ದಂಪತಿ, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಅಮಿತಾಭ್ ಬಚ್ಚನ್, ಕತ್ರಿನಾ ಕೈಫ್ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.