‘ಕಾಂತಾರ 2’ ಚಿತ್ರಕ್ಕೆ ಮುಹೂರ್ತ ದಿನಾಂಕ, ಸ್ಥಳ ಫಿಕ್ಸ್ : ಬದಲಾಗಲ್ಲ ರಿಷಬ್ ನಂಬಿಕೆ

Public TV
1 Min Read
Kantara 3

ಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ‘ಕಾಂತಾರ’  ಪ್ರೀಕ್ವೆಲ್ ಸ್ಕ್ರಿಪ್ಟ್ ಅನ್ನು ಬಹುತೇಕ ಮುಗಿಸಿದ್ದಾರಂತೆ. ಕಾಂತಾರ (Kantara) ಚಿತ್ರಕ್ಕೆ ಮಾತುಗಳನ್ನೂ ಹೆಣೆದಿರುವ ಅವರು ಸ್ಕ್ರಿಪ್ಟ್ ಗೆ ಅಂತಿಮ ಸ್ಪರ್ಷ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇದರ ಜೊತೆ ಜೊತೆಗೆ ಶೂಟಿಂಗ್ (Shooting) ಸ್ಥಳಗಳನ್ನೂ ಅವರು ಹುಡುಕುತ್ತಿದ್ದು, ಈ ಎಲ್ಲವನ್ನೂ ಮುಗಿಸಿಕೊಂಡು ಆಗಸ್ಟ್ ನಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಿದ್ದಾರೆ ಎನ್ನುವುದು ಅವರ ತಂಡದಿಂದ ಸಿಕ್ಕಿರುವ ಮಾಹಿತಿ.

Kantara 5

ಕಾಂತಾರ ಸಿನಿಮಾದ ಮುಹೂರ್ತ ಕಳೆದ ಬಾರಿ ಯಾವ ದೇವಸ್ಥಾನದಲ್ಲಿ ಆಗಿತ್ತೋ, ಮತ್ತೆ ಅದೇ ದೇವಸ್ಥಾನದಲ್ಲೇ ಕಾಂತಾರ ಪ್ರಿಕ್ವೆಲ್ (Prequel) ಮುಹೂರ್ತ ಆಗಲಿದೆಯಂತೆ. ಆನೆಗುಡಿ (Anegudi) ಗಣಪತಿ ದೇವಸ್ಥಾನದಲ್ಲೇ ಮುಹೂರ್ತ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 27ನೇ ತಾರೀಖು ಕಾಂತಾರ ಪ್ರಕ್ವೆಲ್ ಗೆ ಮಹೂರ್ತ ನಿಗದಿಯಾಗಿದೆ. ಕಾಂತಾರ ಮೊದಲ ಭಾಗ ಕೂಡ ಆಗಸ್ಟ್ ನಲ್ಲಿ ಮುಹೂರ್ತ ಕಂಡಿತ್ತು. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

kantara 1 1

ಆಗಸ್ಟ್ ನಲ್ಲಿ ಕಾಂತಾರ ಪ್ರಿಕ್ವೆಲ್ ಗೆ ಮುಹೂರ್ತವಾದರೆ ಸೆಪ್ಟೆಂಬರ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ ರಿಷಬ್ ಶೆಟ್ಟಿ. ಪಂಜುರ್ಲಿ ದೈವದ ಸುತ್ತವೇ ಚಿತ್ರಕಥೆ ಇರುವುದರಿಂದ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ ‘ಕಾಂತಾರ’ 2 ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಹೊಂಬಾಳೆ ಫಿಲ್ಮ್ಸ್(Hombale Films) ನಿರ್ಮಾಣದಲ್ಲಿ ಕಾಂತರ ಚಿತ್ರ ಮೂಡಿ ಬಂದಿತ್ತು. ರಿಷಬ್‌ಗೆ ಸಪ್ತಮಿ ಗೌಡ (Saptami Gowda) ನಾಯಕಿಯಾಗಿ ನಟಿಸಿದ್ದರು. ದೈವ ಕಥೆಯುಳ್ಳ ಈ ಚಿತ್ರ ಸಕ್ಸಸ್ ಕಂಡಿತ್ತು. ಹಾಗಾಗಿ ಕಾಂತಾರ 2 ಚಿತ್ರದ ಮೇಲೆ ಅತೀ ನಿರೀಕ್ಷೆ ಮೂಡಿದೆ.

Share This Article