ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಕರ್ನಾಟಕದಲ್ಲಿರುವ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡುತ್ತಾ ಮುಂದೆ ಸಾಗುತ್ತಿದೆ. ಈಗಾಗಲೇ ಗಳಿಕೆಯ ಲೆಕ್ಕದಲ್ಲಿ ಕೆಜಿಎಫ್ 2 ಸಿನಿಮಾವನ್ನೂ ಹಿಂದಿಕ್ಕೆ ಮುಂದೆ ಸಾಗುತ್ತಿದೆ. ಇದೀಗ ಸಿಕ್ಕಿರುವ ಮತ್ತೊಂದು ಮಾಹಿತಿ ಅಂದರೆ, ಈವರೆಗೂ ಕರ್ನಾಟಕದಲ್ಲಿ ಈ ಸಿನಿಮಾದ ಟಿಕೆಟ್ಸ್ (Tickets) ಬರೋಬ್ಬರು ಒಂದು ಕೋಟಿ ಮಾರಾಟವಾಗಿವೆಯಂತೆ. ಈ ಮೂಲಕ ಬಹುತೇಕ ದಾಖಲೆಗಳನ್ನು ಕಾಂತಾರ ಪುಡಿಪುಡಿ ಮಾಡಿ ಮುನ್ನುಗ್ಗುತ್ತಿದೆ.
Advertisement
ಕಾಂತಾರ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಕೇವಲ ಕನ್ನಡ ಸಿನಿಮಾ ರಂಗದಲ್ಲಿ ನಟ ಹಾಗೂ ನಿರ್ದೇಶಕರಾಗಿ ಹೆಸರು ಮಾಡಿದ್ದವರು, ಇಂದು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. ಹಾಗಾಗಿ ನಾನಾ ಸಿನಿಮಾ ರಂಗದಿಂದ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮೊನ್ನೆಯಷ್ಟೇ ತೆಲುಗಿನಲ್ಲಿ ಸಿನಿಮಾ ಮಾಡುವಂತೆ ಅಲ್ಲು ಅರ್ಜುನ್ ತಂದೆ ಕೇಳಿಕೊಂಡಿದ್ದರು. ಇದೀಗ ಬಾಲಿವುಡ್ ನಿಂದಲೂ ಅವಕಾಶ ಬಂದಿದೆ.
Advertisement
Advertisement
ಈ ಕುರಿತು ಮಾತನಾಡಿರುವ ರಿಷಬ್ ಶೆಟ್ಟಿ (Rishabh Shetty), ‘ನನಗೆ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ. ಆದರೆ, ಸದ್ಯಕ್ಕೆ ನಾನು ಎಲ್ಲಿಯೂ ಹೋಗುತ್ತಿಲ್ಲ. ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಹಾಗಾಗಿ ಇಲ್ಲಿಯೇ ಇದ್ದುಕೊಂಡು ಸಿನಿಮಾ ಮಾಡುತ್ತೇನೆ. ಆ ಸಿನಿಮಾವನ್ನೇ ವಿವಿಧ ಸಿನಿಮಾ ರಂಗದ ಪ್ರೇಕ್ಷಕರು ನೋಡಲಿ ಎನ್ನುವುದು ನನ್ನಾಸೆ ಅಂದಿದ್ದಾರೆ. ಇದನ್ನೂ ಓದಿ:ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್
Advertisement
ಹಿಂದಿ ಸಿನಿಮಾ ರಂಗದ ಬಗ್ಗೆಯೂ ಮಾತನಾಡಿರುವ ಅವರು, ತಾವು ಯಾವಾಗಲೂ ಅಮಿತಾಭ್ ಬಚ್ಚನ್ ಅವರನ್ನು ಕೊಂಡಾಡುವುದಾಗಿಯೂ ತಿಳಿಸಿದ್ದಾರೆ. ಈ ಹೊತ್ತಿನ ನಟರಾದ ಶಾಹಿದ್ ಕಪೂರ್ ಮತ್ತು ಈಗಾಗಲೇ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಶಾರುಖ್ ಖಾನ್ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಎಲ್ಲ ಸಿನಿಮಾ ರಂಗದ ಬಗ್ಗೆಯೂ ತಮಗೆ ಅಭಿಮಾನವಿದ್ದು, ಕನ್ನಡದಲ್ಲೇ ಸಿನಿಮಾ ಮಾಡುವ ಮೂಲಕ ಇತರ ಚಿತ್ರರಂಗವನ್ನೂ ಗೌರವಿಸುವುದಾಗಿ ಅವರು ತಿಳಿಸಿದ್ದಾರೆ.
ಕಾಂತಾರ ಸಿನಿಮಾ ಬಾಲಿವುಡ್ ನಲ್ಲೂ ಸಖತ್ ಸದ್ದು ಮಾಡುತ್ತಿದೆ. ಈವರೆಗೂ 65 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿದೆ. ಇನ್ನೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ದೇಶದಾದ್ಯಂತ ಒಟ್ಟು 300 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಹೀಗಾಗಿಯೇ ರಿಷಬ್ ಶೆಟ್ಟಿ ಅವರಿಗೆ ಡಿಮಾಂಡ್ ಕ್ರಿಯೇಟ್ ಆಗಿದೆ. ವಿವಿಧ ಸಿನಿಮಾ ರಂಗದಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.