ಆದಿಪುರುಷ ಚಿತ್ರಕ್ಕೆ ಕಂಟಕ : ರಿಲೀಸ್ ಗೂ ಮುನ್ನ ದೂರು ದಾಖಲು

Public TV
2 Min Read
Adipurush 2

ಪ್ರಭಾಸ್ ಮತ್ತು ಕೃತಿ ಸನೂನ್ (Kriti Sanoon) ಕಾಂಬಿನೇಷನ್ ನ ‘ಆದಿಪುರುಷ’ (Adipurusha) ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ವಿವಾದಕ್ಕೀಡಾಗುತ್ತಲೇ ಇದೆ. ಟ್ರೈಲರ್ ರಿಲೀಸ್ ಆದಾಗ ಹಾಗೂ ಪೋಸ್ಟರ್ ಬಿಡುಗಡೆ ಆದಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಚಿತ್ರದ ಮೇಲಿತ್ತು. ಸಿನಿಮಾದ ಪೋಸ್ಟರ್ ನಲ್ಲೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡದಂತೆ ದೂರು ದಾಖಲಾಗಿದೆ.

Adipurush 3

ಸಂಜಯ್ ತಿವಾರಿ ಎನ್ನುವವರು ಬಾಂಬೆ (Mumbai) ಹೈಕೋರ್ಟ್ (High Court) ಮೆಟ್ಟಿಲು ಏರಿದ್ದು, ಈಗಾಗಲೇ ರಿಲೀಸ್ ಆದ ಪೋಸ್ಟರ್ ನಲ್ಲಿ ನಿರ್ಮಾಪಕರು ಮತ್ತು ಕಲಾವಿದರು ಗಂಭೀರ ತಪ್ಪುಗಳನ್ನು ಮಾಡಿದ್ಧಾರೆ. ಈ ತಪ್ಪುಗಳು ನಾಳೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಅಲ್ಲದೇ, ಒಂದು ವರ್ಗದ ಜನರ ಧಾರ್ಮಿಕ ಭಾವನೆಗೂ ನೋವನ್ನುಂಟು ಮಾಡಬಹುದು. ಹಾಗಾಗಿ ಸಿನಿಮಾದಲ್ಲಿ ಅಂತಹ ತಪ್ಪುಗಳು ನುಸುಳದಂತೆ ನಿರ್ದೇಶನ ನೀಡಬೇಕು ಎಂದು ಅವರು ದೂರಿನಲ್ಲಿ (Complaint) ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:The Kerala Story ಚಿತ್ರದ ಸಕ್ಸಸ್ ಬಳಿಕ ‘ರಣವಿಕ್ರಮ’ ನಟಿಗೆ ಬಿಗ್‌ ಆಫರ್

Adipurush 4

ದೂರು ಒಂದು ಕಡೆಯಾದರೆ, ನಟ ಪ್ರಭಾಸ್‌ಗೆ (Prabhas) ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನೆಚ್ಚಿನ ನಟನ ಸಿನಿಮಾಗಾಗಿ ಕಾದು ನೋಡುವ ಬಹುದೊಡ್ಡ ವರ್ಗವೇ ಇದೆ. `ಆದಿಪುರುಷ್’ (Adipurush) ಚಿತ್ರಕ್ಕಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷವೇ ವಾರಿಸು, ತುನಿವು ಜೊತೆ `ಆದಿಪುರುಷ್’ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ ಕಳಪೆ ಎಂದು ನೆಟ್ಟಿಗರಿಂದ ಉತ್ತರ ಬಂದ್ಮೇಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು. ಈಗ ರಿಲೀಸ್‌ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ.

Adipurush 1

`ಆದಿಪುರುಷ್’ ಸಿನಿಮಾದ ಟೀಸರ್‌ಗೆ ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ, ನೆಟ್ಟಿಗರಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಹಾಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಅದರಂತೆಯೇ ಈಗ ಜೂನ್‌ 16, 2023ರಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ.

adipurush

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಓಂ ರೌತ್ ಚಿತ್ರ ಜೂನ್ 16ರಂದೇ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಜ.17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ `ಆದಿಪುರುಷ್’ ರಿಲೀಸ್‌ಗೆ ಇನ್ನು ಕೆಲ ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 3ಡಿ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಅಪ್‌ಡೇಟ್‌ ಕೇಳಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

Share This Article