– ಸಲಾಂ ಎಂದ ವಿವಿಎಸ್ ಲಕ್ಷ್ಮಣ್
ಲಕ್ನೋ: ಉತ್ತರ ಪ್ರದೇಶದ ಚಹಾ ವ್ಯಾಪಾರಿಯೋಬ್ಬರು ಚಹಾ ಮಾರಾಟದಲ್ಲಿ ಬಂದ ಶೇ. 80ರಷ್ಟು ಲಾಭವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್(45) ಅನೇಕ ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸುಮಾರು 40 ಮಂದಿ ಮಕ್ಕಳಿಗೆ ಉಚಿತ ಶಿಕ್ಷಣ, ಪಠ್ಯ-ಪುಸ್ತಕ ಹಾಗೂ ಓದಲು ಬೇಕಾಗುವ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಚಹಾ ಮಾರಾಟದಲ್ಲಿ ಸಿಗುವ ಲಾಭದಲ್ಲಿ ಶೇ.80ರಷ್ಟು ಭಾಗ ಬಡಮಕ್ಕಳ ಶಿಕ್ಷಣಕ್ಕೆ ಮಲಿಕ್ ನೀಡುತ್ತಿದ್ದಾರೆ. ಈ ಬಗ್ಗೆ ತಿಳಿದು ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮಲಿಕ್ ಕಾರ್ಯವನ್ನು ಹೊಗಳಿ, ಎಂಥಹ ಪ್ರೇರಣೆ ಎಂದು ಬರೆದು ಟ್ವೀಟ್ ಮಾಡಿ ಮಲಿಕ್‍ಗೆ ಸಲಾಂ ಎಂದಿದ್ದಾರೆ.
Advertisement
Advertisement
ಬಡ ಕುಟುಂಬದಲ್ಲಿ ಬೆಳೆದ ಮಲಿಕ್ ಅವರಿಗೆ ಪ್ರೌಢಶಾಲೆ ಬಳಿಕ ಓದಲು ಸಾಧ್ಯವಾಗಲಿಲ್ಲ. ಕುಟುಂಬದ ಆರ್ಥಿತ ಪರಿಸ್ಥಿತಿಯಿಂದ ಹೆಚ್ಚಿನ ಶಿಕ್ಷಣ ಪಡೆಯಲು ಆಗಲಿಲ್ಲ. ಆದ್ದರಿಂದ ಶಿಕ್ಷಣದಿಂದ ವಂಚಿತರಾಗಿ ಬಡ ಮಕ್ಕಳು ಕೆಲಸಕ್ಕೆ ಹೋಗುವುದನ್ನ ನೋಡಿದರೆ ನನಗೆ ನನ್ನ ಬಾಲ್ಯ ನೆನಪಾಗುತ್ತೆ. ನನ್ನ ರೀತಿ ಈ ಮಕ್ಕಳು ಶಿಕ್ಷಣ ಪಡೆಯಲಾಗದೆ ಕೊರಗಬಾರದು. ಹೀಗಾಗಿ ನನ್ನ ಸಂಪಾದನೆಯಲ್ಲಿ ಈ 40 ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದೇನೆ. ಇದರಲ್ಲಿ ನನಗೆ ಖುಷಿ ಸಿಗುತ್ತಿದೆ ಎಂದು ಮಲಿಕ್ ತಿಳಿಸಿದ್ದಾರೆ.
Advertisement
Mohammad Mahboob Malik, a tea seller from Kanpur takes care of education for
40 children. He has a small tea shop and spends 80% of his income on the education of these children. What an inspiration ! pic.twitter.com/H1FTxeYuz7
— VVS Laxman (@VVSLaxman281) November 6, 2019
Advertisement
2017ರಲ್ಲಿ ‘ಮಾ ತುಜೆ ಸಲಾಂ’ ಹೆಸರಿನಲ್ಲಿ ಎನ್‍ಜಿಓ ಆರಂಭಿಸಿದೆ. ಚಹಾ ಮಾರಾಟ ಮಾಡಿ ಬರುವ ಲಾಭದ ಶೇ.80ರಷ್ಟು ಹಣವನ್ನು ನಾನು 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ಶಾಲೆಗೆ ಖರ್ಚು ಮಾಡುತ್ತಿದ್ದೇನೆ. ಮಕ್ಕಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್ 40 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅವರು ಚಿಕ್ಕ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಅದರಿಂದ ಬಂದ ಶೇ. 80ರಷ್ಟು ಲಾಭವನ್ನು ಈ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ, ಎಂಥಹ ಪ್ರೇರಣೆ! ಎಂದು ಬರೆದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಮಲಿಕ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇತ್ತ ನೆಟ್ಟಿಗರು ಕೂಡ ಮಲಿಕ್ ಕಾರ್ಯಕ್ಕೆ ಮನ ಸೋತಿದ್ದಾರೆ.