ಲಕ್ನೋ: 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಯೂನಿಫಾರ್ಮ್ ಬದಲಾಗಿ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಕತ್ತರಿ ಹಾಕಿದೆ. ಶಾಲಾ ಸಿಬ್ಬಂದಿ ಪ್ಯಾಂಟ್ ಕತ್ತರಿಸುವ ವೇಳೆ ವಿದ್ಯಾರ್ಥಿ ಕಾಲಿಗೆ ಗಾಯವಾಗಿದ್ದು, ನಡೆದಾಡಲು ಆಗುತ್ತಿಲ್ಲ.
ಉತ್ತರ ಪ್ರದೇಶ ರಾಜ್ಯದ ಕಾನ್ಪುರನ ಸಿಕಂದರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ಸಮವಸ್ತ್ರ ಧರಿಸದೇ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದರಿಂದ ಕೋಪಗೊಂಡ ಶಾಲಾ ಆಡಳಿತ ಮಂಡಳಿ ಕತ್ತರಿಯಿಂದ ಪ್ಯಾಂಟ್ ನ್ನು ತೊಡೆಯ ಭಾಗದವರೆಗೂ ಕತ್ತರಿಸಿದ್ದಾರೆ. ಈ ವೇಳೆ ಪ್ಯಾಂಟ್ ಕತ್ತರಿಸುವಾಗ ವಿದ್ಯಾರ್ಥಿಯ ತೊಡೆಯ ಭಾಗಕ್ಕೆ ಕತ್ತರಿ ತಗುಲಿ ಗಾಯವಾಗಿದೆ.
Advertisement
Advertisement
ಶಾಲೆಯ ಸಿಬ್ಬಂದಿ ನನ್ನ ಮಗನ ಮಾತನ್ನು ಕೇಳದೇ ಪ್ಯಾಂಟ್ ಕಟ್ ಮಾಡಿದ್ದಾರೆ. ಈ ವೇಳೆ ಕತ್ತರಿ ನನ್ನ ಮಗನ ತೊಡೆಯ ಭಾಗಕ್ಕೆ ತಗುಲಿದೆ. ಸಮವಸ್ತ್ರ ಧರಿಸದ ಕಾರಣ ನನ್ನ ಮಗನನ್ನು ಮನೆಗೆ ಕಳುಹಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ಈ ವರ್ತನೆ ತಪ್ಪು ಎಂದು ವಿದ್ಯಾರ್ಥಿ ತಂದೆ ವಿನೋದ್ ಪಾಲ್ ಹೇಳಿದ್ದಾರೆ.
Advertisement
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
#UttarPradesh: A Class 11 student in #Kanpur suffered cuts on both legs allegedly after school management used scissors to cut off his jeans as punishment for not wearing school dress. Case registered by police pic.twitter.com/rCuMWcHdaC
— ANI UP/Uttarakhand (@ANINewsUP) November 18, 2017