ಜೈಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾನ್ಪುರದ ಕ್ರೈಂ ಬ್ರಾಂಚ್‍ನಲ್ಲಿ ಕಾನ್‍ಸ್ಟೇಬಲ್‍ನನ್ನು ಅಮಾನತುಗೊಳಿಸಲಾಗಿದೆ.
ಕಾನ್‍ಪುರ ಅಪರಾಧ ವಿಭಾಗದಲ್ಲಿ ಕಾನ್‍ಸ್ಟೇಬಲ್ ಅಜಯ್ ಗುಪ್ತಾ, ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಮತ್ತು ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ್ದರು. ಅಜಯ್ ಗುಪ್ತಾ ಅವರ ಈ ಕಾಮೆಂಟ್ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‍ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹೆಡ್‍ಕ್ವಾರ್ಟರ್ಸ್ ಕೂಡ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕಾನ್‍ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ
Advertisement
Advertisement
Advertisement
ಅಜಯ್ ಗುಪ್ತಾ ಅವರು ಕಮಿಷನರೇಟ್‍ನ ಕ್ರೈಂ ಬ್ರಾಂಚ್‍ನಲ್ಲಿ ಬಹಳ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಆಗಸ್ಟ್ 14 ರಂದು ಪೊಲೀಸರಿಗೆ ಪದಕಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಇದನ್ನು ಗಮನಿಸಿದ ಅಜಯ್ ಗುಪ್ತಾ ಅವರು ಕಮಿಷನರೇಟ್‍ನ ಅಧಿಕಾರಿಗಳಿಂದ ಡಿಜಿಪಿಗೆ ಮೆಡಲ್ ಲಿಸ್ಟ್ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಕಮಿಷನರೇಟ್ ಪೊಲೀಸರು ಉತ್ತರವನ್ನು ಕೂಡ ನೀಡಿದ್ದರು. ಈ ನಡುವೆ ಅವರು ಕೆಲವು ಟ್ವೀಟ್‍ಗಳನ್ನು ಮಾಡಿದ್ದಾರೆ. ಅಲ್ಲದೇ ಇದಕ್ಕೆ ಪ್ರತಿಯಾಗಿ ಪ್ರಧಾನಿ ಮತ್ತು ಮಹಿಳಾ ಐಎಎಸ್ ಅಧಿಕಾರಿಯ ಬಗ್ಗೆ ಅಜಯ್ ಗುಪ್ತಾ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
Advertisement
ಇದಾದ ನಂತರ ಟ್ವೀಟ್ ವೈರಲ್ ಆಗಿದ್ದು, ಅಜಯ್ ತನ್ನ ಟ್ವೀಟ್‍ಗಳನ್ನು ಡಿಲೀಟ್ ಮಾಡಿದ್ದಾರೆ. ಆದರೂ ವಿವಾದಾತ್ಮಕ ಟ್ವೀಟ್‍ನ ಸ್ಕ್ರೀನ್‍ಶಾಟ್‍ಗಳು ಮತ್ತು ಯುಆರ್‌ಎಲ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಾಗಿ ಗುರುವಾರ ಹೆಚ್ಚುವರಿ ಸಿಪಿ ಕೇಂದ್ರ ಕಚೇರಿಯ ಆನಂದ್ ಕುಲಕರ್ಣಿ ಅಜಯ್ ಅವರನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ರಕ್ಷಣೆಗೆ ಧಾವಿಸಿದ ವಿಪತ್ತು ನಿರ್ವಹಣಾ ತಂಡ
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್, ಕಾನ್ಸ್‍ಟೇಬಲ್ ಒಬ್ಬರು ಸೊಶಿಯಲ್ ಮೀಡಿಯಾದಲ್ಲಿ ತಮ್ಮ ಇತಿಮಿತಿಯನ್ನು ಮೀರಿ ಕೆಲವು ಪೋಸ್ಟ್‌ಗಳನ್ನು ಮಾಡಿದ್ದಾರೆ. ಪೊಲೀಸ್ ಕೆಲಸ ಮಾಡುತ್ತಿರುವ ನಮಗೆ ಕೆಲವು ಮಿತಿಗಳಿರುತ್ತದೆ. ಆದರೆ ನಮ್ಮ ಈ ನಡವಳಿಕೆಯಿಂದ ನಿಯಮಗಳ ಉಲ್ಲಂಘನೆಯಾಗಿದೆ. ಇದನ್ನು ಅರಿತು ನಾವು ಅವರನ್ನು ಅಮಾನತುಗೊಳಿಸಿದ್ದೇವೆ ಮತ್ತು ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.