ಬೆಂಗಳೂರ: ಎಸ್.ಎಲ್.ಎನ್ ಕ್ರಿಯೇಷನ್ಸ್ ಅಡಿಯಲ್ಲಿ, ನಾಗೇಶ್ ಕೋಗಿಲು ನಿರ್ಮಾಣದಲ್ಲಿ, ಅರವಿಂದ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಹುಲಿರಾಯ ಈಗ ತೆರೆಗೆ ಬರಲು ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ ಆರಕ್ಕೆ ರಾಜ್ಯಾದ್ಯಂತ ಈ ಚಿತ್ರವು ಪರಮ್ವಾಹ್ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಮ್ಸ್ ರವರ ವಿತರಣೆಯ ಮುಖಾಂತರ ಕನ್ನಡ ಪ್ರೇಕ್ಷಕನೆದುರಿಗೆ ಬರಲಿದೆ.
ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಚಿತ್ರ ಹುಲಿರಾಯ. ತನ್ನ `ಫಸ್ಟ್ ಲುಕ್` ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಸಿನೆಮಾ ಇದು. ತದನಂತರ, `ಮೋಷನ್ ಪೋಸ್ಟರ್’, ಧ್ವನಿ ಸುರುಳಿ ಬಿಡುಗಡೆ, ಮುಂದಕ್ಕೆ ಚಿತ್ರದ `ಅಫಿಶಿಯಲ್ ಟ್ರೈಲರ್’ ಹೀಗೆ ವಿಶಿಶ್ಟವಾದ ಸಂಗತಿಗಳನ್ನು ಚಿತ್ರ ತಂಡ ಪ್ರೇಕ್ಷಕನೆದುರಿಗೆ ತರುತ್ತಾ ಹೋಯಿತು. ಚಿತ್ರದ ಬಗೆಗಿನ ನಿರೀಕ್ಷೆಯೂ ಹೆಚ್ಚಿದೆ. ಈಗಾಗಲೇ ಚಿತ್ರವನ್ನು ನೋಡಿರುವ ಸಿನೆಮಾ ಮಂದಿಯೂ ಸಹ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹುಲಿರಾಯ ಚಿತ್ರದಲ್ಲಿ ಬಾಲು ನಾಗೇಂದ್ರ ನಾಯಕ ನಟನಾಗಿದ್ದು, ಚಿರಶ್ರಿ ಅಂಚನ್ ಹಾಗು ದಿವ್ಯಾ ಉರುಡುಗಾ ನಾಯಕಿಯರಾಗಿದ್ದಾರೆ.
Advertisement
Advertisement
ಚಿತ್ರಕ್ಕೆ ರವಿ ಅವರ ಛಾಯಾಗ್ರಹಣ, ಅರ್ಜುನ್ ರಾಮು ರವರ್ ಸಂಗೀತ ಸಂಯೋಜನೆಯಿದ್ದು ಚಿತ್ರದ ಹಾಡುಗಳೂ ಸಹ ‘ಹಿಟ್’ ಆಗಿವೆ. ಚಿತ್ರದಲ್ಲಿನ ವಿವಿಧ ಸನ್ನಿವೇಶಗಳನ್ನು ಹಾಡುಗಳ ಮುಖಾಂತರ ಕಥೆಯೊಂದಿಗೆ ಸಾಗುವ ಹಾಗೆ ಚಿತ್ರಿಸಿರುವ ನಿರ್ದೇಶಕ, ಹಾಡುಗಳನ್ನ ಸಾಂದರ್ಭಿಕವಾಗಿ ಬಳಸುವುದರಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಚಿತ್ರಕ್ಕೆ ರವಿ ರವರು ಒದಗಿಸಿರುವ ಛಾಯಾಗ್ರಹಣವೇ ಆಗಿರಲಿ, ಅರ್ಜುನ್ ರಾಮು ರವರು ಒದಗಿಸಿರುವ ಸಂಗೀತವೇ ಆಗಿರಲಿ, ಬಾಲು ನಾಗೇಂದ್ರ ರವರ ನಟನೆಯೇ ಆಗಲಿ.. ಎಲ್ಲವೂ `ಸೈ’ ಎನ್ನಿಸಿಕೊಂಡಂತೆಯೇ ಕಾಣುತ್ತಿದೆ. ಹುಲಿರಾಯನ ಕಥೆಯ ಇಂದಿನ ಸಾಮಾಜಿಕ ಆಗುಹೋಗುಗಳನ್ನು ಬಿಂಬಿಸುತ್ತಾ ಮನರಂಜನೆ ನೀಡುತ್ತಾ ಸಾಗುತ್ತದೆ ಎಂದು ಹೇಳುತ್ತಾರೆ ನಿರ್ದೇಶಕರು.
Advertisement
ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಹುಲಿಯೊಂದು ನಾಡಿಗೆ ಬಂದುಬಿಟ್ಟರೆ? ಆಗಬಹುದಾದ ಅನಾಹುತಗಳೇನು? ಆ ಹುಲಿ ಇಲ್ಲಿ , ನಾಡಿನಲ್ಲಿ ಬದುಕಲು ಸಾಧ್ಯವೇ? ಎನ್ನುವ ಒಂದು ಪ್ರಶ್ನೆಯನ್ನು ಎತ್ತುತ್ತಾ, ಸುರೇಶಾ ಎನ್ನುವ ಯುವಕನೊಬ್ಬನ ಜೀವನದ ರೋಚಕವಾದ ಕಥೆಯನ್ನ ಹೇಳುತ್ತಾ ಸಾಗುತ್ತದೆ.
ಇದೇ ವಾರ ತೆರೆಗೆ ಬರಲಿರುವ ಹುಲಿರಾಯ ಪ್ರೇಕ್ಷನಿಗೆ ಇಷ್ಟವಾಗುವ, ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ಕೊಡುಗೆಯಾಗುವ ಸಾಧ್ಯತೆಗಳು ಕಾಣುತ್ತಿವೆ.