– ಕರ್ನಾಟಕ ಬಸ್‌ಗೆ ಮರಾಠಿಗರು ಮಸಿ ಬಳಿದಿದ್ದಕ್ಕೆ ಕನ್ನಡಿಗರ ತಿರುಗೇಟು
ಬಾಗಲಕೋಟೆ: ಇಳಕಲ್ ಬಸ್‌ಗೆ ಮಹಾರಾಷ್ಟ್ರದಲ್ಲಿ (Maharashtra) ಮಸಿ ಬಳಿದಿರುವುದಕ್ಕೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಬಸ್‌ಗೆ ‘ಜೈ ಕರ್ನಾಟಕ’ ಎಂದು ಬರೆದಿರುವ ಘಟನೆ ಚಿತ್ರದುರ್ಗ (Chitradurga) ಹಾಗೂ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಇಳಕಲ್ ಬಸ್ ನಿಲ್ದಾಣದಿಂದ ಮಹಾರಾಷ್ಟ್ರದ ಸೋಲಾಪುರ (Solapur) ಕಡೆ ಹೊರಟಿದ್ದ ಬಸ್‌ನ್ನು ಕೂಡಲಸಂಗಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಬಾಗಲಕೋಟೆ ಜನರು, ಬಸ್ ಮುಂಭಾಗದ ಗಾಜಿನ ಮೇಲೆ ‘ಜೈ ಕರ್ನಾಟಕ’ ಎಂದು ಬರೆದಿದ್ದಾರೆ. ಅಲ್ಲದೇ, ಚಾಲಕನಿಗೆ ಕನ್ನಡ ಧ್ವಜ ಹಿಡಿಸಿ, ಜೈ ಕರ್ನಾಟಕ ಎಂದು ಘೋಷಣೆ ಹಾಕಿಸಿದ್ದಾರೆ. ಇದನ್ನೂ ಓದಿ: ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್
ಫೆ.22 ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದರು. ನಡುರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಮಸಿ ಬಳಿದಿದ್ದರು. ಮರಾಠಿಗರ ಈ ವರ್ತನೆಗೆ ಬಾಗಲಕೋಟೆ ಜನರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?