ಬೆಂಗಳೂರು: ವಿವಾದಾತ್ಮಕ ಟ್ವೀಟ್ ಗಳಿಂದಲೇ ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ದೊಡ್ಡ ಸಿನಿಮಾಗಳಿಗಿಂತಲೂ ಬಾಹುಬಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ತೆಲುಗಿನ ಬಾಹುಬಲಿ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದ್ದು ಇದರಲ್ಲಿ ಕರ್ನಾಟಕದಲ್ಲೂ ಸಿಂಹಪಾಲಿದೆ. ಹೀಗಾಗಿ ಕರ್ನಾಟಕದಲ್ಲಿ ಸ್ವಂತ ಸಿನಿಮಾಕ್ಕಿಂತ ಪರಭಾಷೆಯ ಸಿನಿಮಾವೇ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕನ್ನಡಿಗರಿಗೆ ಅವರ ಭಾಷೆಯ ಮೇಲೆ ಅಭಿಮಾನ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ಕನ್ನಡಿಗರು ಡಬ್ಬಿಂಗ್ ಸಿನಿಮಾವನ್ನು ತಡೆಯುವ ಪ್ರಯತ್ನ ಮಾಡಿದರೂ ತೆಲುಗು ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರಿಗೆ ಉತ್ತಮ ಚಿತ್ರ ಬೇಕು ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
Advertisement
ಎಲ್ಲ ಹೆಮ್ಮೆಯ ಕನ್ನಡಿಗರು ಮೊದಲು ಪರಭಾಷಾ ಸಿನಿಮಾಗಳನ್ನು ನೋಡುವ ಕನ್ನಡಿಗರ ವಿರುದ್ಧ ಹೋರಾಟ ಮಾಡಿ ಎಂದು ಮತ್ತೊಂದು ವ್ಯಂಗ್ಯವಾದ ಟ್ವೀಟ್ ಮಾಡಿದ್ದಾರೆ.
Advertisement
Thundering success of Telugu Bahubali2 in Karnataka being far bigger than biggest of Kannada films proves kannadigas have no pride at all
— Ram Gopal Varma (@RGVzoomin) May 18, 2017
Advertisement
Kannadigas attempt to stop dubbing films is shattered by telugu straight film proving kannadigas have no pride n they just want better film
— Ram Gopal Varma (@RGVzoomin) May 18, 2017
All proud Kannadigas should protest on their own Kannadigas for seeing a telugu straight film many more times than their own Kannada films
— Ram Gopal Varma (@RGVzoomin) May 18, 2017