ಬ್ಯಾಂಕಾಕ್: ಭೂಕಂಪದ (Earthquake) ಬಳಿಕ ಥೈಲ್ಯಾಂಡ್‌ನ (Thailand) ಬ್ಯಾಂಕಾಕ್‌ನಲ್ಲಿ (Bangkok) ಸಿಲುಕಿರುವ ಕನ್ನಡಿಗ ಯೋಗೇಶ್ ʻಪಬ್ಲಿಕ್ ಟಿವಿʼ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಭೂಕಂಪದ ತೀವ್ರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
1:15ರ ಸಮಯದಲ್ಲಿ ಭೂಕಂಪದ ಅನುಭವ ಆಯ್ತು. ಭೂಕಂಪದ ಅನುಭವವಾದಾಗ ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದೆ. ಬಳಿಕ ಅಲ್ಲಿಂದ ಹೊರಗೆ ಓಡಿ ಬಂದು ಪಾರಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ – 40ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ, ಗಗನಚುಂಬಿ ಕಟ್ಟಡಗಳು ನೆಲಸಮ!
ನಾವೆಲ್ಲ 10ನೇ ಮಹಡಿಯಲ್ಲಿ ಇದ್ವಿ, ಭಾರತದ ಸುಮಾರು 500 ಜನ ಇದ್ದಾರೆ ಇಲ್ಲಿ. ಎಲ್ಲರೂ ಕ್ಷೇಮವಾಗಿದ್ದಾರೆ. ಹೋಟೆಲ್‌ನವರು ಮೊದಲು ಅಲ್ಲಿಂದ ಓಡಿಹೋದರು. ಆಮೇಲೆ ನಾವೆಲ್ಲ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಬಂದಿದ್ದೇವೆ ಎಂದಿದ್ದಾರೆ.
ನಾವಿದ್ದ ಹೋಟೆಲ್‌ನ ಮಹಡಿ ಮೇಲಿನ ಸ್ವಿಮ್ಮಿಂಗ್ ಫೂಲ್‌ನಿಂದ ನೀರು ಕೆಳಗೆ ಚೆಲ್ಲಿದೆ. ಕಟ್ಟಡಗಳು ಬಿರುಕು ಬಿಟ್ಟಿವೆ. ಮಾ.31ರ ತನಕ ಇಲ್ಲಿರುವ ಪ್ಲ್ಯಾನ್ ಮಾಡಿದ್ವಿ. ಮುಂದೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: 46 ವರ್ಷದ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್ – ಅಗ್ನಿಶಾಮಕ ಸಿಬ್ಬಂದಿ ನೆರವು ಕೋರಿದ ವೈದ್ಯರು