ಬಿದ್ದು ಎದ್ದು ಗೆದ್ದ ರಾಹುಲ್‌ – ಟೀಕೆಗಳಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟ ಕನ್ನಡಿಗ

Public TV
1 Min Read
kl rahul

ದುಬೈ: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಟೂರ್ನಿಯ ಸೆಮಿಸ್‌ ಹಾಗೂ ಫೈನಲ್‌ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿದ ಕೆ.ಎಲ್‌ ರಾಹುಲ್‌ ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ.

kl rahul 01

ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ಕೆ.ಎಲ್‌ ರಾಹುಲ್‌ ಫಾರ್ಮ್‌ ಕಳೆದುಕೊಂಡು ಮೂಲೆಗುಂಪಾಗಿದ್ದರು. ಗಾಯದ ಸಮಸ್ಯೆ, ಫಾರ್ಮ್‌ ಕಂಡುಕೊಳ್ಳದೇ ಇದ್ದ ಕಾರಣ 2024ರ ಟಿ20 ವಿಶ್ವಕಪ್‌ ತಂಡಕ್ಕೂ ಆಯ್ಕೆಯಾಗದೇ ಉಳಿದಿದ್ದರು. ಇದನ್ನೂ ಓದಿ: ಬ್ಯೂಟಿ ಜೊತೆ ಚಹಲ್‌ ಫೈನಲ್‌ ಪಂದ್ಯ ವೀಕ್ಷಣೆ – ಯಾರಿದು ಯುವತಿ?

team india 01 2

ಆ ಬಳಿಕ ರಣಜಿ ಟ್ರೋಫಿಯಲ್ಲಿ ಹಾಗೂ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಇಂಗ್ಲೆಂಡ್‌ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಫಾರ್ಮ್‌ ಸಾಬೀತು ಮಾಡುವಲ್ಲಿ ರಾಹುಲ್‌ ವಿಫಲವಾಗಿದ್ದರು. ಇದರಿಂದ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ಐಸಿಸಿಯ 24 ಟೂರ್ನಿಗಳಲ್ಲಿ 23 ರಲ್ಲಿ ಗೆಲುವು – ಇದು ರೋ’ಹಿಟ್‌’ ಕ್ಯಾಪ್ಟನ್ಸಿ ಟ್ರ್ಯಾಕ್‌ ರೆಕಾರ್ಡ್‌

ಲೀಗ್‌ ಸುತ್ತಿನ ಪಂದ್ಯಗಳಲ್ಲಿ ಬಾಂಗ್ಲಾ ವಿರುದ್ಧ 41 ರನ್‌, ನ್ಯೂಜಿಲೆಂಡ್‌ ವಿರುದ್ಧ 23 ರನ್‌ ಗಳಿಸಿದ್ದರು. ಆದ್ರೆ ಆಸೀಸ್‌ ವಿರುದ್ಧ ನಡೆದ ಸೆಮಿ ಫೈನಲ್‌ನಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್‌ ರಾಹುಲ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 34 ಎಸೆತಗಳಲ್ಲಿ 42 ರನ್‌ ಗಳಿದ್ರೂ ಟೀಂ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಫೈನಲ್‌ ಪಂದ್ಯದಲ್ಲೂ 34 ರನ್‌ ಗಳಿಸುವ ಮೂಲಕ ಭಾರತ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಕಾರಣರಾಗಿದ್ದಾರೆ.

team india 01

ಭಾರತ ಕೊನೆಯ ಬಾರಿಗೆ 2013ರಲ್ಲಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್‌ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಇದನ್ನೂ ಓದಿ:  140 ಕೋಟಿ ಭಾರತೀಯರ ಕನಸು ನನಸು – ಚಾಂಪಿಯ‌ನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ! 

Share This Article