ಕೌಲಾಲಂಪುರ್: ಮಲೇಷ್ಯಾದ ಪ್ಯಾನಸೋನಿಕ್‍ನಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ (Taekwondo) ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಬೆಂಗಳೂರಿನ (Bengaluru) ದಕ್ಷಿಣ್ ಸೂರ್ಯ, 2 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದು ಅಸಾಧಾರಣ ಸಾಧನೆ ಮಾಡಿದ್ದಾರೆ.
15ರಿಂದ 17 ವರ್ಷದೊಳಗಿನ ವಯೋಮಿತಿಯಲ್ಲಿ 62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದಕ್ಷಿಣ್ ಸೂರ್ಯ ಸ್ಪರ್ಧಿಸಿದ್ದ 4 ವಿಭಾಗಗಳಲ್ಲೂ ಪದಕಗಳ ಬೇಟೆಯಾಡಿರೋದು ವಿಶೇಷವಾಗಿದೆ. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ಗೆ ಕಿಂಗ್ ಕೊಹ್ಲಿ ಗುಡ್‌ಬೈ
ಸ್ಪಾರಿಂಗ್ ವಿಭಾಗದಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಚಿನ್ನ, ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಪ್ಯಾಟರ್ನ್ ವಿಭಾಗದಲ್ಲಿ 1 ಕಂಚಿನ ಪದಕವನ್ನು ದಕ್ಷಿಣ್ ಸೂರ್ಯ (Dakshin Surya) ಗಳಿಸಿದ್ದಾರೆ. ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಸಿರಿಯಾ, ಮಲೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದರು. ಭಾರತ ತಂಡದಿಂದ ಸುಮಾರು 65ಕ್ಕೂ ಹೆಚ್ಚು ಕ್ರೀಡಾಕೂಟಗಳು ಭಾಗಿಯಾಗಿದ್ದು ವಿಶೇಷ. ಇದನ್ನೂ ಓದಿ: ಇನ್ನು ಮುಂದೆ ನಾನು ಪಾಕ್‌ಗೆ ಹೋಗಲ್ಲ: ಡೇರಿಲ್ ಮಿಚೆಲ್
ಬೆಂಗಳೂರಿನ ಹೆಬ್ಬಾಳದಲ್ಲಿರೋ ಎನ್‍ಎಫ್‍ಸಿ (NFC) ತರಬೇತಿದಾರ ಕೆ. ಪವನ್ ಗರಡಿಯಲ್ಲಿ ದಕ್ಷಿಣ್ ಸೂರ್ಯ ಪಳಗಿದ್ದು, ಎನ್‍ಎಫ್‍ಸಿ ವತಿಯಿಂದ 14 ಸ್ಪರ್ಧಿಗಳು ಸ್ಪರ್ಧಿಸಿದ್ದರು. ವೆಂಕಟೇಶ್, ಅಮೃತ, ಹಸೀನಿ ಗೌಡ, ವರ್ಷ ಕುಮಾರ್, ಗರ್ಗಿ ಕೆ. ನಾಯರ್, ಪ್ರಕೃತಿ ಎನ್. ಬಾಣವಾರ, ಪ್ರಣ್ಮಯ ಎನ್. ಬಾಣವಾರ, ಇಕ್‍ಶ್ವಾ ರೆಬ್ಬಾ, ಪ್ರೀತ್, ಹರ್ಷಿತ್ ಸಿಂಗ್, ಅನ್ಯಾ ಸಾಗರ್, ಡಿ.ಸಿ ಸಿದ್ದೇಶ್ ಸ್ಪರ್ಧಿಸಿದ್ದರು. ಎನ್‍ಎಫ್‍ಸಿಯಿಂದಲೇ ಸ್ಪರ್ಧಿಸಿದ್ದ 14 ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ 25 ಚಿನ್ನ, 11 ಬೆಳ್ಳಿ ಹಾಗೂ 10 ಕಂಚಿನ ಪದಕ ಗಳಿಸಿರೋದು ವಿಶೇಷ. ಇದನ್ನೂ ಓದಿ: ಮುಂದಿನ ವಾರದಿಂದ ಐಪಿಎಲ್ 2025 ಟೂರ್ನಿ ಪುನರಾರಂಭ?
ಬೆಂಗಳೂರಿನ ಇಂದಿರಾನಗರದಲ್ಲಿರೋ ಸೆವೆನ್ ಸೆನ್ಸ್ ಮಾಂಟೇಸ್ಸರಿ (Seventh Sense Montessori) ವಿದ್ಯಾರ್ಥಿಯಾದ ದಕ್ಷಿಣ್ ಸೂರ್ಯ ಪ್ರತಿಭೆಯನ್ನು ಗುರುತಿಸಿದ್ದು ಪ್ರಿನ್ಸಿಪಾಲ್ ರಾಜೇಶ್ವರಿ. ಕಳೆದ 12 ವರ್ಷಗಳಿಂದ ಟೇಕ್ವಾಂಡೋ ತರಬೇತುದಾರರಾಗಿರೋ ಕೆ. ಪವನ್ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಟೇಕ್ವಾಂಡೋ ತರಬೇತಿ ಕೊಡಿಸಿ, ಇವತ್ತಿನ ಯಶಸ್ಸಿಗೆ ಕಾರಣವಾಗಿದ್ದಾರೆ. ಇದನ್ನೂ ಓದಿ: ಸ್ಕೇಟಿಂಗ್ ಸ್ಪರ್ಧೆ – ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ಗೆ 29 ಪದಕಗಳು
ದಕ್ಷಿಣ್ ಸೂರ್ಯ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೇಕ್ವಾಂಡೋಗೆ ಆಯ್ಕೆಯಾಗಿದ್ದು, ಈ ಹಿಂದೆ ಚೆನ್ನೈ, ಹೈದ್ರಾಬಾದ್, ಕೇರಳ, ಗೋವಾದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರೋ ಭಾರತೀಯ ವೀರ ಯೋಧರಿಗೆ ಜೋಶ್ ಹ್ಯಾಜಲ್‌ವುಡ್ ಸೆಲ್ಯೂಟ್
ಇದು ಹರ್ಷದ ಸಂಗತಿ
ಇನ್ನೂ ದಕ್ಷಿಣ್ ಸೂರ್ಯ ಚಿನ್ನಗೆದ್ದ ಸಾಧನೆ ಕುರಿತು ಎನ್‍ಎಫ್‍ಸಿ ಕೋಚ್ ಕೆ. ಪವನ್ ಮಾತನಾಡಿ, ಮಲೇಷ್ಯಾದಲ್ಲಿ ಎನ್‍ಎಫ್‍ಸಿ ಟೀಂ ಸಾಧನೆ ಖುಷಿ ತಂದಿದೆ. 12 ವರ್ಷಗಳ ಸುದೀರ್ಘ ತರಬೇತಿಯ ಶ್ರಮ ಫಲಿಸಿದೆ. ಪುರುಷ ಕ್ರೀಡಾಪಟುಗಳ ಜೊತೆಗೆ ಮಹಿಳಾ ಪಟುಗಳ ಸಾಧನೆ ಹೆಚ್ಚು ಹರ್ಷ. ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರು ಅಂತ ಶ್ಲಾಘಿಸಿದ್ದಾರೆ.
ನಮ್ ಶಾಲೆಗೆ ಖುಷಿ ಸಂಗತಿ
ಸೆವೆನ್ಸ್ ಸೆನ್ಸ್ ಮಾಂಟೇಸ್ಸರಿ ಪ್ರಿನ್ಸಿಪಾಲ್ ರಾಜೇಶ್ವರಿ ಮಾತನಾಡಿ, ದಕ್ಷಿಣ್ ಸೂರ್ಯ ಸಾಧನೆ ನಮ್ಮ ಶಾಲೆಗೆ ಹರ್ಷ ತಂದಿದೆ. ದಕ್ಷಿಣ್ ಈ ಗೌರವಕ್ಕೆ ಅರ್ಹ ವಿದ್ಯಾರ್ಥಿ. ಅವನ ಹಾರ್ಡ್ ವರ್ಕ್ ಫಲ ನೀಡಿದೆ, ಅವನು ಇನ್ನಷ್ಟು ಪದಕಗಳನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದ್ದಾರೆ.