ಬೆಂಗಳೂರು: ರಾನಿ ಚಿತ್ರದ ನಾಯಕ, ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ (Kiran Raj) ಪ್ರಯಾಣಿಸುತ್ತಿದ್ದ ಕಾರು (Car) ಕೆಂಗೇರಿ ಬಳಿ ಅಪಘಾತವಾಗಿದೆ.
ಮುದ್ದರಾಯನ ಪಾಳ್ಯ ವೃದ್ದಾಶ್ರಮಕ್ಕೆ ಹೋಗಿ ಬರುತ್ತಿದ್ದಾಅಪಘಾತ (Accident) ಸಂಭವಿಸಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 11ರ ಪ್ರೋಮೋ ಔಟ್- ಹೊಸ ಅಧ್ಯಾಯ ಬರೆಯಲು ಸಜ್ಜಾದ ದೊಡ್ಮನೆ!
ಗುದ್ದಿದ ರಭಸಕ್ಕೆ ಕಿರಣ್ ರಾಜ್ ಗೆ ಎದೆಯ ಭಾಗಕ್ಕೆ ಪೆಟ್ಟಾಗಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಿರಣ್ ರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಅಪಘಾತ ಸಂಭವಿಸಿದೆ.