ಟಿವಿ ಪರದೆಯಲ್ಲಿ `ಕನ್ನಡತಿ’ಯ (Kannadathi) ಹರ್ಷ ಕುಮಾರ್ ಆಗಿ ಮಿಂಚಿದ್ದ ಕಿರಣ್ ರಾಜ್ (Kiran Raj) ಇದೀಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯ `ಕನ್ನಡತಿ’ ಸೀರಿಯಲ್ ಅಂತ್ಯವಾದ ಬೆನ್ನಲ್ಲೇ ಕಿರಣ್ ರಾಜ್ ಮುಂದೇನು ಮಾಡ್ತಾರೆ ಅನ್ನೋದಕ್ಕೆ ಇಲ್ಲಿದೆ ಡಿಟೈಲ್ಸ್.
ಕಿನ್ನರಿ, ದೇವತೆ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಗಮನ ಸೆಳೆದಿದ್ದ ಕಿರಣ್ ರಾಜ್ ಮತ್ತಷ್ಟು ಜನಪ್ರಿಯತೆ ತಂದು ಕೊಟ್ಟಿದ್ದು ಕನ್ನಡತಿ ಸೀರಿಯಲ್, ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಕನ್ನಡತಿಯ ಕನ್ನಡ ಅಭಿಮಾನಕ್ಕೆ ಕಥೆಗೆ ಟಿವಿ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ಈ ಧಾರಾವಾಹಿಗೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ: ಬಾತ್‌ಟಬ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ
`ಕನ್ನಡತಿ’ ಧಾರಾವಾಹಿಯನ್ನ ಅದೆಷ್ಟು ಅಚ್ಚುಕಟ್ಟಾಗಿ ಟಿವಿಪರದೆಯಲ್ಲಿ ತೋರಿಸಿದ್ದರೋ ಹಾಗೆಯೇ ಕನ್ನಡತಿಯ ಅಂತಿಮ ಅಧ್ಯಾಯ ಕೂಡ ಅರ್ಥಪೂರ್ಣವಾಗಿ ತೋರಿಸಿ ಸೀರಿಯಲ್‌ಗೆ ಅಂತ್ಯ ಹಾಡಿದ್ದಾರೆ.
ನಟ ಕಿರಣ್ ರಾಜ್ ಅವರು ಕನ್ನಡತಿ ಸೀರಿಯಲ್ ಮಾಡುವಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು. ತಮ್ಮದೇ ಬಟ್ಟೆ ಬ್ರ್ಯಾಂಡ್ ಜೊತೆಗೆ ಬಿರಿಯಾನಿ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ನಟ ಕಿರಣ್ ಸಾಕಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ.
ಇನ್ನೂ ಕಿರಣ್ ನಟಿಸಿರುವ `ಭರ್ಜರಿ ಗಂಡು’ (Bharjari Gandu), `ಶೇರ್’ (Sher) ಸಿನಿಮಾಗಳು ತೆರೆಗೆ ಬರಲಿದೆ. ಇದೇ ಫೆಬ್ರವರಿಯಲ್ಲಿ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k