ಟಿ.ಪಿ.ಅಶೋಕ ಅವರ ಕಥನ ಭಾರತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Public TV
1 Min Read
tp ashoka kendra sahitya award kathana bharathi

ನವದೆಹಲಿ: ಕನ್ನಡದ ಟಿ.ಪಿ. ಅಶೋಕ ಮತ್ತು ಎಚ್.ಎಸ್. ಶ್ರೀಮತಿ ಅವರಿಗೆ 2017 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕನ್ನಡದ ಟಿ.ಪಿ. ಅಶೋಕ ಅವರ ಕಥನ ಭಾರತಿ ಕೃತಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ 1 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಕನ್ನಡದ ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿದ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- 1 ಮತ್ತು 2 ಕೃತಿ ಆಯ್ಕೆಯಾಗಿವೆ. ಪ್ರಶಸ್ತಿ 50 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ ಎಂದು ಅಕಾಡೆಮಿ ತಿಳಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಕಥನ ಭಾರತಿ ಕೃತಿಯ ಕರ್ತೃ ಟಿ.ಪಿ ಅಶೋಕ ಅವರು ಎರಡು ವರ್ಷಗಳ ಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಪಕ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

shrimathi maha shwethadevi kannada

kendra sahitya award kathana bharathi press copy

kendra sahitya award kathana bharathi press copy 2

kendra sahitya award kathana bharathi press copy 2 1

kendra sahitya award kathana bharathi press copy 1

Share This Article
Leave a Comment

Leave a Reply

Your email address will not be published. Required fields are marked *